ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ….

ಪುತ್ತೂರು: ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಗಿ 71 ವರ್ಷಗಳಾಗಿವೆ. ಭಾರತವು ಗಣರಾಜ್ಯವಾದ ಈ ಶುಭದಿನದಲ್ಲಿ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಶ್ರಮಿಸಿದ ಎಲ್ಲರಿಗೂ ತಲೆಬಾಗಿ ನಮಿಸಬೇಕಿದೆ ಎಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಹೇಳಿದರು.
ಅವರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಮಾಡಿ ಮಾತಾಡಿದರು. ಭಾರತೀಯ ಸಂವಿಧಾನವು ವಿಶ್ವದಲ್ಲಿಯೇ ಬೃಹತ್ ಹಾಗೂ ಸದೃಢ ಸಂವಿಧಾನವಾಗಿದೆ. ಭಾರತವನ್ನು ಗಣರಾಜ್ಯವನ್ನಾಗಿಸಲು ನಮ್ಮ ಹಿರಿಯರು ಪಟ್ಟ ಶ್ರಮ ಅಪಾರ. ಸಂವಿಧಾನದ ಭದ್ರ ಬುನಾದಿಯ ಮೇಲೆ ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು, ಶಿಕ್ಷಣದ ಮೂಲಕ ಈ ಸಾಧನೆಯ ಹಾದಿಯನ್ನು ಕ್ರಮಿಸಲು ಶ್ರಮಪಡಬೇಕು ಎಂದು ನಿಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ಸೌಹಾರ್ಧತೆ, ಶಾಂತಿ, ಸಹಿಷ್ಣುತೆ, ಸಮಾನತೆ ಇವು ದೇಶವನ್ನು ಭದ್ರಪಡಿಸುವ ಮೌಲ್ಯಗಳಾಗಿವೆ. ಕಳೆದ ಏಳು ದಶಕಗಳಲ್ಲಿ ದೇಶವು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಸಾಧಿಸಬೇಕಾದದ್ದು ಬಹಳಷ್ಟಿದೆ. ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ನಾವು ಶ್ರಮಪಟ್ಟರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು. ಸಂವಿಧಾನದ ಆಶೋತ್ತರಗಳನ್ನು ಎಲ್ಲರೂ ಮನಗಂಡು ಅದನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ಧಾರಿಯನ್ನು ನಿರ್ವಹಿಸಬೇಕೆಂದರು ಕರೆ ನೀಡಿದರು.
ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಮಹೇಶ್.ಕೆ.ಕೆ ಭಾರತೀಯ ಸಂವಿಧಾನದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮ ಸಂಯೋಜಕರಾದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ .ಆಶ್ಲೆ.ಡಿ.ಸೋಜ ಸ್ವಾಗತಿಸಿ. ಪ್ರೊ .ಸಂದೇಶ್ ಕಾರಂತ್ ವಂದಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button