ಶಾಸಕ ಯು.ಟಿ. ಖಾದರ್ ವಿರುದ್ಧ ಮತ್ತೊಂದು ದೂರು…
ಪುತ್ತೂರು: ಶಾಸಕ ಯು.ಟಿ. ಖಾದರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ನೀಡಿದ ಪ್ರಚೋದನಾಕಾರಿ ಹೇಳಿಕೆಯೇ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಪ್ರತಿಭಟನೆಗೆ ಕಾರಣ. ಹೀಗಾಗಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಖಾದರ್ ಅವರ ಹೇಳಿಕೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ವಾಸ್ತವ ಅಂಶವನ್ನು ಮರೆಮಾಚಿ, ಪ್ರತಿಭಟನೆ ಮತ್ತು ದಂಗೆಗೆ ಇಳಿಯುವಂತೆ ಜನರನ್ನು ಪ್ರೇರೇಪಿಸಿದೆ ಎಂದು ಹಿಂದೂ ಸಂಘಟನೆಗಳು ದೂರಿನಲ್ಲಿ ತಿಳಿಸಿವೆ. ಬಜರಂಗದಳದ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ ಅವರು ಡಿ.21ರಂದು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ