ಶೈಕ್ಷಣಿಕ ಮತ್ತು ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ….

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ರಿ), ಸರ್ವಶಿಕ್ಷಣ ಅಭಿಯಾನ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ(ರಿ) ಬೆಂಗಳೂರು- ದಕ್ಷಿಣ ಶಾಲಾ ಹಾಗೂ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ 2019-20 ಕಾರ್ಯಕ್ರಮ ನಡೆಯಿತು.
ಕಸದಿಂದ ರಸ ಮಾಡುವ ಪರಿಕಲ್ಪನೆಯೇ ವೃತ್ತಿ ಶಿಕ್ಷಣ. ಜೀವನದಲ್ಲಿ ಹೊಸತನವನ್ನು ಕಾಣಲು ವೃತ್ತಿ ಶಿಕ್ಷಣ ಅಗತ್ಯ, ಸುಪ್ತ ಪ್ರತಿಭೆಯನ್ನು ಹೊರತಂದು ಹೊಸತನವನ್ನು ಸೃಷ್ಟಿ ಮಾಡುವುದರ ಮೂಲಕ ಜೀವನದ ಆನಂದ ಸಂತೋಷವನ್ನು ಅನುಭವಿಸಬೇಕು. ಮಾತ್ರವಲ್ಲ ಸಮಯದ ಸದುಪಯೋಗ ಆದಾಗ ಧನಾತ್ಮಕ ಭಾವನೆಗಳು ಉದ್ದೀಪನಗೊಳ್ಳುತ್ತದೆ, ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್‍ ಕಲ್ಲಡ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭುವನೇಶ್ವರಿಯ ಪ್ರತಿಮೆಯ ಅನಾವರಣವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶಿಲ್ಪಾ ರಮೇಶ್‍ ಕಲ್ಲಡ್ಕ ಹಾಗೂ ಶ್ರೀರಾಮ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಯಾದ ನಿತಿನ್‍ಕಲ್ಲಡ್ಕ ರವರು ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ್ ಮಾಧವ, ವಯಸ್ಕರ ಶಿಕ್ಷಣಾಧಿಕಾರಿಯಾದ ಸುಧಾಕರ್ ಕೆ, ವಸ್ತು ಪ್ರದರ್ಶನ ನೋಡಲ್‍ಅಧಿಕಾರಿ ಶೊಭಾಎನ್, ಬಂಟ್ವಾಳದ ಕ್ಷೇತ್ರ ಸಮನ್ವಯ ಅಧಿಕಾರಿ ರಾಧಾಕೃಷ್ಣ, ಶ್ರೀರಾಮ ವಿದ್ಯಾಕೇಂದ್ರ ಸಹಸಂಚಾಲಕರಾದ ರಮೇಶ್‍ಎನ್, ಕಲ್ಲಡ್ಕ ಲಕ್ಷ್ಮೀಗಣೇಶ್‍ ಹೋಟೇಲಿನ ಮಾಲಿಕರಾದ ರಾಜೇಂದ್ರ ಹೊಳ್ಳ, ಮೈಸ್ ಸಂಸ್ಥೆಯ ಮಾಲಕರಾದ ರಮೇಶ್ ಪೂಜಾರಿ, ಸಂಭ್ರಮ ಎಲೆಕ್ಟ್ರಾನಿಕ್ಸ್ ನ ಮಾಲಕರಾದ ಗಿರೀಶ್ ನೆಟ್ಲ, ದಕ್ಷಿಣಕನ್ನಡ ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷರಾದ ಚೆನ್ನಕೇಶವ, ಬಂಟ್ವಾಳ ತಾಲೂಕು ಚಿತ್ರಕಲಾ ಸಂಘದ ಅಧ್ಯಕ್ಷರಾದ ಮುರಳಿ ಕೃಷ್ಣ, ಶಿಕ್ಷಣ ಸಂಯೋಜಕರಾದ ಸುಶೀ¯,ಬಂಟ್ವಾಳ ತಾಲೂಕು ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರಾದ ರಮಾನಂದ, ಶ್ರೀರಾಮ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವಸಂತಿಕುಮಾರಿ, ಶ್ರೀರಾಮ ಪ್ರೌಢಶಾಲಾ ಶಿಕ್ಷಕರು, ದ.ಕ ಜಿಲ್ಲಾ ವಿವಿಧ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೇವದಾಸ್ ಕೆ ಸ್ವಾಗತಿಸಿ, ಸುಫಲಾ ಬಿ ವಂದಿಸಿ, ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button