ಶ್ರೀಕೃಷ್ಣ ಮಂದಿರ ಅಮ್ಟೂರು – ವಿಂಶತಿಉತ್ಸವ….

ಬಂಟ್ವಾಳ: ಶ್ರೀಕೃಷ್ಣ ಮಂದಿರ ಅಮ್ಟೂರು ಇದರ 20ನೇ ವಾರ್ಷಿಕೋತ್ಸವು ಡಿ.29 ರಂದು ರಂದು ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಿಶ್ವನಾಥ ಶೆಟ್ಟಿ ಕಂಗ್ವೆ ಉಪ್ಪಿನಂಗಡಿ ಇವರು ವಹಿಸಿದ್ದರು.
ಭಜನಾ ಮಂದಿರಗಳ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಒಂದು ಕಡೆ ಒಟ್ಟು ಸೇರಿ ಭಜನೆ, ಕೀರ್ತನೆಗಳ ಪಠಿಸುವುದರಿಂದ ಮನಃಶಾಂತಿಯಾಗುವುದು.ಇದರಿಂದ ಸಂಘಟನೆ ಬೆಳೆಯುವುದು.ಸಾಮಾಜಿಕ ಕಾರ್ಯ ಮಾಡುವುದರಿಂದ ಸಮಾಜದಲ್ಲಿ ಎಲ್ಲರೂ ಬೆಳೆಯಲು ಅನುಕೂಲವಾಗುವುದು. ಹಿಂದೂ ಸಮಾಜ ಪುರಾತನವಾದುದು ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಶ್ರೀ ಪರಮಪೂಜ್ಯಕೇಶವಾನಂದ ಭಾರತೀ ಶ್ರೀಪಾದಂಗಳವರು ಜಗದ್ಗರು ಶಂಕರಾಚಾರ್ಯತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ, ಕಾಸರಗೋಡು ಇವರು ಆಶೀರ್ವಚನ ಮಾಡಿದರು.
ವೇದಿಕೆಯಲ್ಲಿ ಶ್ರೀಕೃಷ್ಣ ಮಂದಿರದ ಅಧ್ಯಕ್ಷರು ರಮೇಶ್ ಶೆಟ್ಟಿಗಾರ್, ಮಹಾಬಲ ಶೆಟ್ಟಿ ನಂದಗೋಕುಲ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಲಕ್ಷ್ಮೀ ವಿ. ಪ್ರಭು, ಮನೋಜ್‍ ಕಟ್ಟೆಮಾರ್ ಉಪಸ್ಥಿತರಿದ್ದರು.
ನಿವೃತ್ತ ಯೋಧ ಶ್ರೀನಿವಾಸ ಶೆಟ್ಟಿ ಬೈದರಡ್ಕ, ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಕೇಶ್‍ ಇವರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ಕ್ಯಾನ್ಸರ್ ಪೀಡಿತ ವೆಂಕಪ್ಪ ಶೆಟ್ಟಿಗಾರ್ ಹಾಗೂ ಕಿಡ್ನಿ ವೈಪಲ್ಯಗೊಂಡ ಅವರ ಪತ್ನಿ ಗುಲಾಬಿ ಇವರಿಗೆ ಮಂದಿರದ ವತಿಯಿಂದ ಧನ ಸಹಾಯ ಮಾಡಲಾಯಿತು.
ಮಂದಿರದ ಲೆಕ್ಕಪರಿಶೋಧಕರಾದ ಕುಶಾಲಪ್ಪ ಅಮ್ಟೂರು ಸ್ವಾಗತಿಸಿ, ಕಾರ್ತಿಕ್ ವರದಿ ವಾಚಿಸಿ, ವಸಂತ ಭಟ್ಟಹಿತ್ಲು ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಸರಗೋಡು ಕೊಲ್ಲಂಗಾಣ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.

Sponsors

Related Articles

Leave a Reply

Your email address will not be published. Required fields are marked *

Back to top button