ಶ್ರೀಮದ್ಭಾಗವತವು ಜೀವನಕ್ಕೆ ಪ್ರೇರಣೆ – ಕೈಯೂರು ನಾರಾಯಣ ಭಟ್ ….
ಬಂಟ್ವಾಳ : ಸನಾತನ ಸಂಸ್ಕೃತಿಯ ಅಪೂರ್ವ ಭಾಗವೆನಿಸಿರುವ ಶ್ರೀಮದ್ಭಾಗವತ ಪ್ರವಚನವು ನಮ್ಮ ಜೀವನಾದರ್ಶಕ್ಕೆ ಪ್ರೇರಕಾ ಶಕ್ತಿಯಾಗಬೇಕು ಮುಂದಿನ ಪೀಳಿಗೆಯಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವಂತಾಗಬೇಕು ಎಂದು ಧಾರ್ಮಿಕ ಚಿಂತಕ ಕೈಯೂರು ನಾರಾಯಣ ಭಟ್ ಹೇಳಿದರು.
ಅವರು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಘಟಕದ ಸಹಯೋಗದೊಂದಿಗೆ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹ ಜ್ಞಾನಯಜ್ಞ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರವಚನ ಸಪ್ತಾಹದಲ್ಲಿ ಪ್ರವಚನ ನೀಡಿದ ಕೈಯೂರು ನಾರಾಯಣ ಭಟ್ಟರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ನಾರಾಯಣ ಸೋಮಯಾಜಿ , ಮಹಿಳಾ ವೇದಿಕೆ ಅಧ್ಯಕ್ಷೆ ಉಮಾವತಿ ಸೌಮ್ಯ , ಶಂಕರ ಸೇವಾಪ್ರತಿಷ್ಟಾನ ಸಂಚಾಲಕ ಎ. ಕೃಷ್ಣ ಶರ್ಮ, ದೇವದಾಸ ಪ್ರಭು , ಮೀನಾಕ್ಷಿ ವಿ .ರಾವ್ ಅನಿಸಿಕೆ ವ್ಯಕ್ತಪಡಿಸಿದರು.
ಶಂಕರ ಸೇವಾ ಪ್ರತಿಷ್ಠಾನ ಕಾರ್ಯದರ್ಶಿ ಜಗದೀಶ ಹೊಳ್ಳ ಸ್ವಾಗತಿಸಿ ನಿರೂಪಿಸಿದರು. ಸದಸ್ಯ ಜಯಾನಂದ ಪೆರಾಜೆ ವಂದಿಸಿದರು.