ಶ್ರೀರಾಮ ಪದವಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ…..

ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ, ಕಲ್ಲಡ್ಕ ಇದರ ದಶಮಾನೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಬಂಟ್ವಾಳ, ಎಮ್‍ಆರ್‍ಪಿಎಲ್ ಮಂಗಳೂರು, ಮಹಿಮಾ ಫೌಂಡೇಶನ್, ಬಂಟ್ವಾಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಹಾಗೂ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ನ. 30 ಶನಿವಾರ ಬೆಳಗ್ಗೆ 9.00ಕ್ಕೆ ಉದ್ಘಾಟನೆಗೊಳ್ಳಲಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ(ಎಂಎ, ಎಂಕಾಂ ಎಂಎಸ್ಸಿ), ಐಟಿಐ, ಡಿಪ್ಲೊಮಾ, ಬಿಇ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಆಸಕ್ತರಿರುವ ಉದ್ಯೋಗಾಕಾಂಕ್ಷಿಗಳೂ(ಬಿಎಡ್) ಭಾಗವಹಿಸಬಹುದು. ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಂಟ್ವಾಳ ತಾಲೂಕು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲಯನ್ಸ್ ಉಪಜಿಲ್ಲಾ ರಾಜ್ಯಪಾಲ ಲ. ಡಾ| ಗೀತ್ ಪ್ರಕಾಶ್, ಎರಡನೇ ಉಪಜಿಲ್ಲಾ ರಾಜ್ಯಪಾಲ ಲ.ವಸಂತ್ ಶೆಟ್ಟಿ, ನಾಲ್ಕನೇ ವಲಯ ಅಧ್ಯಕ್ಷ ಸುಧಾಕರ ಆಚಾರ್ಯ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಂಗಳೂರು ಜಿಲ್ಲಾ ಉದ್ಯೋಗಾಧಿಕಾರಿ ಶೈಲಜಾ ಕೆ., ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಗೋಳ್ತಮಜಲು ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾ¯ ಆಚಾರ್ಯ, ಬಾಳ್ತಿಲ ಗ್ರಾ. ಪಂ. ಅಧ್ಯಕ್ಷ ವಿಠ್ಠಲ ನಾಯ್ಕ ಆಗಮಿಸಲಿದ್ದಾರೆ.

ಓಷಿಯನ್ ಪರ್ಲ್, ದಿಯಾ ಸಿಸ್ಟಮ್ಸ್, ವಿನ್‍ಮ್ಯಾನ್ ಸಾಫ್ಟ್‍ವೇರ್ ಇಂಡಿಯಾ, ಎಲ್&ಟಿ ಫೈನಾನ್ಸ್, ತೇಜಾ ಟೆಕ್ನಿಕಲ್ ಸರ್ವೀಸ್, ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈ. ಲಿ., ಎನ್‍ಟಿಟಿಎಫ್ ಬೆಂಗಳೂರು ಆಂಡ್ ಸಿಐಪಿಇಟಿ,(ಅಂಡರ್ ಎಮ್‍ಆರ್‍ಪಿಎಲ್ ಸ್ಪಾನ್ಸರ್‍ಶಿಪ್), ಬ್ರೈಟ್ ಹೆಚ್‍ಆರ್ ಸೊಲ್ಯುಷನ್ ಆಂಡ್ ಸರ್ವೀಸಸ್, ಹಿಂದುಜಾ ಗ್ಲೋಬಲ್ ಸೊಲ್ಯುಷನ್ ಆಟೊಮ್ಯಾಟ್ರಿಕ್ಸ್, ಇನ್‍ಫಿವೇ ಗ್ಲೋಬಲ್, ಹೊಂಡಾ ಮ್ಯಾಟ್ರಿಕ್ಸ್, ಸನ್‍ಬ್ರೈಟ್ ಮ್ಯಾನ್‍ಪವರ್ ಸೊಲ್ಯುಷನ್ ಪ್ರೈ. ಲಿ., ಪಿಎಮ್‍ಕೆಕೆ ಮಂಗಳೂರು, ನೋವಲ್, ಎಸ್‍ಬಿಐ ಕಾರ್ಡ್, ಭಾರತ್ ಆಟೋ ಮೋಟಾರ್ಸ್ ಪ್ರೈ. ಲಿ., ಮುತ್ತೂಟ್ ಫಿನ್‍ಕಾರ್ಪ್, ಬಿಎಸ್‍ಎಲ್ ಇಂಡಿಯಾ ಪ್ರೈ. ಲಿ., ಯುರೇಕಾ ಫಾರ್ಬ್ಸ್, ಸಾಮಂತ ಮೈಕ್ರೋ ಫೈನಾನ್ ಲಿ., ಎಸ್‍ಬಿಎಮ್‍ಎಸ್ ಹೋಂಡಾ, ಕ್ಷಿತಿಜಾ ಎಂಟರ್‍ಪ್ರೈಸಸ್, ಮಾಂಡೊವಿ ಮೋಟಾರ್ಸ್ ಪ್ರೈ. ಲಿ., ಎಬಿಎಫ್ ಗ್ರೂಪ್ ಆಫ್ ಕಂಪೆನೀಸ್, ಸುಮೇರು ಗ್ರೂಪ್ ಆಫ್ ಮ್ಯಾನೇಜ್‍ಮೆಂಟ್, ಕೆಎಸ್‍ಆರ್‍ಟಿಸಿ, ಏರ್‍ಟೆಲ್, ಈಕ್ವಲೈಸ್ ಆರ್‍ಸಿಎಮ್, ಗಾನ್ ಇನ್ಸ್ಟಿಟ್ಯೂಟ್, ಪ್ರಕಾಶ್ ರಿಟೇಲ್ ಪ್ರೈ. ಲಿ.,(ಹರ್ಷ), ಐಡಿಬಿಐ ಫೆಡರಲ್ ಲೈಫ್ ಇನ್ಶೂರೆನ್ಸ್, ಕಂ.ಲಿ., ಶ್ರೀ ಸಾಯಿ ಎಂಟರ್‍ಪ್ರೈಸಸ್, ತಿರುಮಲ ಹೋಂಡಾ, ಎಮ್‍ಇಡಿಪ್ಲಸ್, ಆರ್ಚಿಡ್ ದಿ ಇಂಟರ್‍ನ್ಯಾಶನಲ್ ಸ್ಕೂಲ್, ಲೇಬರ್ ನೆಟ್ ಸರ್ವೀಸ್ ಇಂಡಿಯಾ ಪ್ರೈ. ಲಿ., ಲೈಟ್‍ನಿಂಗ್, ಲೋಹಾಟೆಕ್ ಪ್ರೆಸಿಷನ್ ಪ್ರೈ. ಲಿ., ಡಿಡಿಯುಜಿಕೆವೈ, ಮುತ್ತೂಟ್ ಫೈನಾನ್ಸ್, ಸಂಭವ್ ಫೌಂಡೇಶನ್, ಸ್ಪಂದನಾ ಬ್ರೈಟ್ ಫ್ಯೂಚರ್ ಇನೋವೇಶನ್, ಜಸ್ಟ್ ಡಯಲ್, ಸ್ವಿಗ್ಗಿ, ಇತ್ಯಾದಿ ಕಂಪೆನಿಗಳು ಭಾಗವಹಿಸಲಿವೆ.

Sponsors

Related Articles

Leave a Reply

Your email address will not be published. Required fields are marked *

Back to top button