ಶ್ರೀ ಮಹಾದೇವ ಮಹಾವಿಷ್ಣು ಜೋಡು ದೇವಸ್ಥಾನದ ಬ್ರಹ್ಮಕಲಶೋತ್ಸವ – ಸಾಹಿತ್ಯ ಗಾನ ನೃತ್ಯ ವೈಭವ…

ಕಾಸರಗೋಡು: ಜಿಲ್ಲೆಯ ವಿಶೇಷ ದೇವಸ್ಥಾನವಾದ ಪೈಕಾನ ವಲವಡಲ ಶ್ರೀ ಮಹಾದೇವ ಮಹಾವಿಷ್ಣು ಜೋಡು ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ದಿನಾಂಕ ದಿನಾಂಕ 18.03.2023 ರಿಂದ 30.03.2023 ರ ವರೆಗೆ ಬಹಳ ವಿಜೃಂಭಣೆಯಿಂದ ಸಕಲ ವಿಧಿ ವಿಧಾನಗಳಿಂದ ಶಾಸ್ತ್ರಬದ್ಧವಾಗಿ ನಡೆಯತ್ತಲಿದೆ.
ಈ ಪುಣ್ಯಪ್ರದವಾದ ಸಮಾರಂಭದ ಅಂಗವಾಗಿ ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 22.03.2023 ರಂದು ರಾತ್ರಿ 8.00 ರಿಂದ ಡಾ ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ( ರಿ.) ಕಾಸರಗೋಡು ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಸಂಸ್ಥೆಯ ಹೆಮ್ಮೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು ಸನುಷಾ ಸುಧಾಕರನ್, ಚುಕ್ಕಿ ವಿಟ್ಲ, ಪ್ರಥಮ್ಯ ಯು ವೈ, ಸುಚಿತ್ರ, ಸೌಮ್ಯ, ದಿವ್ಯ, ಸುಮಲತಾ, ಜಯಲತಾ, ಸುಧಾ, ಲೀಲಾವತಿ, ಅಹನಾ ಎಸ್ ರಾವ್, ಜ್ಞಾನ ರೈ ಪುತ್ತೂರು, ಹರೀಶ್ ಪಂಜಿಕಲ್ಲು, ಪ್ರಣತಿ ಸರ್ಪಮಲೆ, ಹಿಮಾನಿ ಸರ್ಪಮಲೆ, ಪ್ರಜನ್ಯ ಪ್ರವೀಣ್, ಭಾಸ್ಕರ್ ಅಡೂರ್, ವಿಷ್ಣು ಸುಧಾಕರನ್, ಉಷಾ ಸುಧಾಕರನ್, ಇಂದುಮತಿ, ಹರಿಣಿ, ರಮ್ಯ, ಗಾಯತ್ರಿ, ಕವಿತ, ಯದುಶ್ರೀ ಹೀಗೆ ಸಂಸ್ಥೆಯ ಹೆಮ್ಮೆಯ ಕಲಾವಿದರ ಕೂಡುವಿಕೆಯಿಂದ ಅದ್ದೂರಿಯಾಗಿ ಜರುಗಿತು . ಈ ಕಾರ್ಯಕ್ರಮದ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಸಂಸ್ಥೆಯ ಅಧ್ಯಕ್ಷೆಯಾದ ಡಾ ವಾಣಿಶ್ರೀ ಕಾಸರಗೋಡು ಇವರು ನಡೆಸಿಕೊಟ್ಟರು . ಶ್ರೀ ದೇವರ ಸನ್ನಿಧಿಯಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಅತ್ಯುತ್ತಮ ಪ್ರತಿಭಾ ರತ್ನಗಳಾದ ಜ್ಞಾನ ರೈ ಪುತ್ತೂರು, ಅಹನಾ ಎಸ್ ರಾವ್ ಹಾಗೂ ಸನುಷಾ ಸುಧಾಕರನ್ ಇವರನ್ನು ಸಂಸ್ಥೆಯ ವತಿಯಿಂದ ಬಾಲಸುಬ್ರಹ್ಮಣ್ಯ ಭಟ್, ನಾರಾಯಣ ಭಟ್ ಮುಂಡೋಡುಮೂಲೆ, ಸತ್ಯನಾರಾಯಣ ಭಟ್, ವಿನೋದ್ ನಂಬಿಯಾರ್ ಕಲ್ಲoಗೂಡ್ಲು ಮುಂತಾದ ಗಣ್ಯರ ಸಮ್ಮುಖದಲ್ಲಿ ವಿಶೇಷವಾಗಿ ಹಾರ ಹಾಕಿ ಶಾಲು ಹೊದೆಸಿ ಸನ್ಮಾನ ಫಲಕ ದೊಂದಿಗೆ ” ಕಲಾ ಚೈತನ್ಯ” ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಭಾವಂತ ಕಲಾವಿದರನ್ನು ಸಂಸ್ಥೆಯ ವತಿಯಿಂದ ಕೃಷ್ಣಮೂರ್ತಿ ಎಡಪ್ಪಾಡಿ ಇವರ ಉಪಸ್ಥಿತಿಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Sponsors

Related Articles

Back to top button