ಸರ್ಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಬೇಕು – ಕೋಟ ಶ್ರೀನಿವಾಸ ಪೂಜಾರಿ …

ಸುಳ್ಯ: ಅಧಿಕಾರಕ್ಕೆ ಬರುವ ಯಾವುದೇ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಸಮರ್ಪಕವಾಗಿ ಸಮಾಜದ ಕಟ್ಟಕಡೆಯ ಫಲಾನುಭವಿಗೂ ತಲುಪಬೇಕು ಎನ್ನುವುದು ಸರಕಾರದ ಧ್ಯೇಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ತಾಲೂಕು ಆಡಳಿತ ಸುಳ್ಯ, ನಗರ ಪಂಚಾಯತ್ ವತಿಯಿಂದ ನಡೆದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮತ್ತು ವಿವಿಧ ಸಲವತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಳ್ಯದ 110ಕೆವಿ ವಿದ್ಯುತ್ ಯೋಜನೆಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು ಎಂದ ಅವರು ಯಾವುದೇ ಸರಕಾರಗಳು ಜಾರಿಗೆ ತರುವ ಕಾಯ್ದೆಗಳು ಮತ್ತು ಯೋಜನೆಗಳು ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಸರಕಾರಗಳು ಜಾರಿಗೆ ತರುತ್ತದೆ. ಇದರಿಂದ ಅಲ್ಲಿನ ಸ್ಥಳೀಯರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದೇ ರೀತಿ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯಿಂದಲೂ ಕರ್ನಾಟಕದ ಯಾವೊಬ್ಬ ಪ್ರಜೆಗೂ, ಯಾವುದೇ ಸಮುದಾಯದವರಿಗೂ ಅನ್ಯಾಯ ಆಗುವುದಿಲ್ಲ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ ಎಸ್. ಅಂಗಾರ ಮಾತನಾಡಿ ಸುಳ್ಯದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಹಲವು ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಭಿವೃದ್ದಿ ಯೋಜನೆಗಳಿಗೆ ಸರಕಾರದ ಕಡೆಯಿಂದ ಅನುಮತಿ ದೊರೆತರೂ ಕೆಲವು ಕಡೆ ಜನರು ಸಹಕಾರ ನೀಡುವುದಿಲ್ಲ. ಸರಕಾರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗಬೇಕಾದರೆ ಜನರ ಸಹಕಾರ ಅಗತ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ಆಶಾ ತಿಮ್ಮಪ್ಪ, ಎನ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಸುಭದಾ ಎಸ್. ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು, ಸದಸ್ಯೆ ಪುಪ್ಪಾ ಮೇದಪ್ಪ ಗೌಡ, ನಗರ ಪಂಚಾಯತ್ ಸದಸ್ಯರಾದ ಎಂ. ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಬಾಲಕೃಷ್ಣ ಭಟ್, ಸುಧಾಕರ್ ಕೇರ್ಪಳ ಕೆ.ಎಸ್. ಉಮ್ಮರ್, ಶೀಲಾ ಅರುಣ್, ಬಾಲಕೃಷ್ಣ ರೈ, ಶಶಿಕಲಾ ನೀರಬಿದಿರೆ, ಪ್ರಮಿತಾ, ವಾಣಿಶ್ರೀ, ಸುಶೀಲಾ ಜಿನ್ನಪ್ಪ, ನಾರಾಯಣ, ಬುದ್ದ ನಾಯ್ಕ್, ಶೀಲ್ಪಾ ಸುದೇವ್,ಪೂಜಿತಾ ಕೇರ್ಪಳ, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ತಹಶೀಲ್ದಾರ್ ಕುಂಞಿ ಅಹಮ್ಮದ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.

ತಹಶೀಲ್ದಾರ್ ಕುಂಞಿ ಆಹಮ್ಮದ್ ಸ್ವಾಗತಿಸಿ, ನ.ಪಂ ಮುಖ್ಯಾಧಿಕಾರಿ ಮತ್ತಡಿ ವಂದಿಸಿದರು, ದೇವರಾಜ್ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ 110 ಮಂದಿಗೆ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ, ಪ್ರಾಕೃತಿಕ ವಿಕೋಪ ಪರಿಹಾರ ಚೆಕ್ ವಿತರಣೆ, ವೀಲ್ ಚಯರ್ ಮತ್ತು ವಿವಿಧ ಸವಲತ್ತುಗಳ ವಿತರಣೆ ನಡೆಯಿತು.

Sponsors

Related Articles

Leave a Reply

Your email address will not be published. Required fields are marked *

Back to top button