ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಮಹಿಳಾ ವೇಟ್ ಲಿಫ್ಟಿಂಗ್ ತಂಡ ಚಾಂಪಿಯನ್ಸ್….

ಮಂಗಳೂರು:ಬೆಂಗಳೂರಿನ ಶ್ರೀ ಸಾಯಿ ರಾಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ವಿಟಿಯು 20 ನೇ ಅಂತರ-ಕಾಲೇಜು ತೂಕ ಎತ್ತುವ ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಮಹಿಳಾ ವೇಟ್ ಲಿಫ್ಟಿಂಗ್ ತಂಡವು ರಾಜ್ಯ ಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
49 ಕೆಜಿ ವಿಭಾಗದಲ್ಲಿ ದೀಕ್ಷಾ ಪಿ ಪ್ರಥಮ ಸ್ಥಾನ, 55 ಕೆಜಿ ವಿಭಾಗದಲ್ಲಿ ಆನ್ ವಿ ಮರಿಯಾ ದ್ವಿತೀಯ ಸ್ಥಾನ, 59 ಕೆಜಿ ವಿಭಾಗದಲ್ಲಿ ವೈಷ್ಣವಿ ಡಿ ಕೆ ಪ್ರಥಮ ಸ್ಥಾನ, 64 ಕೆಜಿ ವಿಭಾಗದಲ್ಲಿ ಸ್ವಾತಿ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ. ಇದಲ್ಲದೆ, ಅಖಿಲ ಭಾರತ ಅಂತರ ವಿಶ್ವ ವಿದ್ಯಾಲಯದ ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ದೀಕ್ಷಾ ಪಿ, ವೈಷ್ಣವಿ ಡಿ.ಕೆ., ಸ್ವಾತಿ ಮತ್ತು ನಮ್ರಶಾ ಎನ್. ಗಾಣಿಗ ಆಯ್ಕೆಯಾಗಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button