ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಉದ್ಯೋಗ ನೇಮಕದಲ್ಲಿ ದಾಖಲೆಯ ಸಾಧನೆ- 146 ವಿದ್ಯಾರ್ಥಿಗಳು ಇನ್ಫೋಸಿಸ್ ಗೆ ಆಯ್ಕೆ….
ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಉದ್ಯೋಗ ಮತ್ತು ತರಬೇತಿ, ವೃತ್ತಿಮಾರ್ಗದರ್ಶನ ಇಲಾಖೆಯ ಉದ್ಯೋಗ ನೇಮಕಾತಿ ಪ್ರಕ್ರಿಯೆ ಜುಲೈ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಉದ್ಯೋಗ ಆಯ್ಕೆ ನಿಮಿತ್ತ ಪ್ರತಿವರ್ಷ 150 ಕ್ಕೂ ಹೆಚ್ಚು ಪ್ರೀಮಿಯಂ ಕಂಪನಿಗಳು ಸಹ್ಯಾದ್ರಿ ಕಾಲೇಜಿಗೆ ಭೇಟಿಕೊಡುತ್ತಿವೆ.
2019 -20 ಸಾಲಿನ 146 ವಿದ್ಯಾರ್ಥಿಗಳು ಇನ್ಫೋಸಿಸ್ ಕಂಪೆನಿಗೆ ಆಯ್ಕೆಯಾಗಿದ್ದಾರೆ. ಇದು ಈ ಭಾಗದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಾಖಲೆಯ ನೇಮಕಾತಿಯಾಗಿದೆ. ಟಿಸಿಎಸ್ ಕಂಪೆನಿಗೆ 61 ವಿದ್ಯಾರ್ಥಿಗಳು, ಐಬಿಎಂ ಕಂಪನಿಗೆ 104 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಹಲವಾರು ವಿದ್ಯಾರ್ಥಿಗಳು ಅತಿಹೆಚ್ಚು ವಾರ್ಷಿಕವೇತನ ನೀಡುವ ಅಡೋಬ್ (24.5 ಲಕ್ಷ ), ಎಚ್ ಎಸ್ ಬಿ ಸಿ ಸಾಫ್ಟ್ ವೇರ್ ಡೆವಲೆಪ್ ಮೆಂಟ್ (12 ಲಕ್ಷ), ಅಕೋಲೈಟ್ (12 ಲಕ್ಷ), ಎಸ್ಎಪಿ ಲ್ಯಾಬ್ಸ್ (10 ಲಕ್ಷ) ಮೊದಲಾದ ಕಂಪೆನಿಗಳಲ್ಲಿ ಉದ್ಯೋಗ ಗಳಿಸಿದ್ದಾರೆ. ಕ್ಯಾಂಪಸ್ ನೇಮಕಾತಿಗಾಗಿ ಭಾರತೀಯ ನೌಕಾಪಡೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ಇದು ಸಹ್ಯಾದ್ರಿ ಕಾಲೇಜಿಗೆ ಅತ್ಯಂತ ಗೌರವದ ಮತ್ತು ಹೆಮ್ಮೆಯ ವಿಷಯವಾಗಿದೆ.
ಕ್ಯಾಂಪಸ್ ನೇಮಕಾತಿಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡಲು 1600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಪ್ಟಿಟ್ಯೂಡ್ ಮತ್ತು ತಾಂತ್ರಿಕ ತರಬೇತಿ ನೀಡಲಾಗಿದೆ.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ತರಬೇತಿ, ನೇಮಕಾತಿ ಮತ್ತು ವೃತ್ತಿಮಾರ್ಗದರ್ಶನ ವಿಭಾಗವು ಅತ್ಯಂತ ಹೆಚ್ಚು ಕ್ರಿಯಾತ್ಮಕವಾಗಿದ್ದು, ವಿದ್ಯಾರ್ಥಿಗಳನ್ನು ವಿವಿಧ ಕಂಪೆನಿಗಳಲ್ಲಿ ಉದ್ಯೋಗ ನೇಮಕಾತಿಗೊಳಿಸುವಲ್ಲಿ ಸಮರ್ಥವಾಗಿದೆ. ವಿಭಾಗವು ಡೀನ್ ಪ್ರೊ. ರಶ್ಮಿ ಭಂಡಾರಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಹಾಯಕ ನೇಮಕಾತಿ ಅಧಿಕಾರಿಗಳು, ವಿಭಾಗಗಳ ಶಿಕ್ಷಕರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ ಸಂಯೋಜಕರು ಬೆಂಬಲ ನೀಡುತ್ತಿದ್ದಾರೆ.