ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿಗೆ ಹಲವು ಬಹುಮಾನ….

ಮಂಗಳೂರು:ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮಿಳುನಾಡಿನ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ವೆಲ್ಲೂರಿನ ವಿಐಟಿ ಆಯೋಜಿಸಿದ್ದ ಗ್ರಾವಿಟಾಸ್ -19 ರಲ್ಲಿ ಟೀಮ್ ಕ್ಲಾನ್ ಮುದಿತಾದ ಒಟ್ಟು 21 ಪ್ರಥಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ ನ ಸುಮಂತ್ ಮತ್ತು ಅಖಿಲೇಶ್ ಅವರ ಮಾರ್ಗದರ್ಶನದಲ್ಲಿ ತಂಡವು ಬಹುಮಾನಗಳನ್ನು ಗೆದ್ದುಕೊಂಡಿತು.
ಕೆಮ್-ಇ-ಕಾರ್ ನಲ್ಲಿ ಪ್ರಥಮ ಸ್ಥಾನ, ಡಿ-ಮೆಲ್ಟ್ ನಲ್ಲಿ ಪ್ರಥಮ ಸ್ಥಾನ, ಏರೋಮೋಡೆಲ್ಲಿಂಗ್ ನಲ್ಲಿ ದ್ವಿತೀಯ ಸ್ಥಾನ, ಕೆಮ್-ಇ-ಫೌಂಟೇನ್ ನಲ್ಲಿ ನಾಲ್ಕನೇ ಸ್ಥಾನ, ಕೆಮ್-ಇ-ಲೈಟ್ ನಲ್ಲಿ ಐದನೇ ಸ್ಥಾನಗಳಿಸಿ ಸಹ್ಯಾದ್ರಿ ಕಾಲೇಜ್ ಗೆ ರಾಷ್ಟ್ರೀಯ ಮನ್ನಣೆ ಗಳಿಸಿ ಕೊಟ್ಟಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button