ಸಹ್ಯಾದ್ರಿ ಕಾಲೇಜಿಗೆ ಎನ್ಐಟಿ ಕುರುಕ್ಷೇತ್ರದಲ್ಲಿ ಹಲವು ಬಹುಮಾನ…..

ಮಂಗಳೂರು:ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ಐಟಿ ಕುರುಕ್ಷೇತ್ರದಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
ದ್ವಿತೀಯ ವರ್ಷದ ಮೆಕ್ಯಾನಿಕಲ್ ವಿಭಾಗದ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಸಹ್ಯಾದ್ರಿಯ ಸಮಾಗ್ರತ ತಂಡದಿಂದ ಒಟ್ಟು 22 ವಿದ್ಯಾರ್ಥಿಗಳು ಎನ್ಐಟಿ ಕುರುಕ್ಷೇತ್ರ ಆಯೋಜಿಸಿದ್ದ ‘ಟೆಕ್ ಸ್ಪರ್ಧಾ 19’ ನಲ್ಲಿ ಭಾಗವಹಿಸಿದ್ದರು. ರೋಬೋ ಸಾಕರ್ ನಲ್ಲಿ 2 ಮತ್ತು 3 ನೇ ಸ್ಥಾನ, ವಾಟರ್ ರಾಕೆಟ್ ನಲ್ಲಿ 2 ನೇ ಹಾಗೂ 3 ನೇ ಸ್ಥಾನ, ಮೇಜ್ ನಲ್ಲಿ 5 ನೇ ಸ್ಥಾನ, ಆರ್ಸಿ ಬಾಟ್ನಲ್ ನಲ್ಲಿ 6 ಮತ್ತು 7 ನೇ ಸ್ಥಾನಗಳನ್ನು ಗಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button