ಸುಳ್ಯ – ಇಂಧನ ಬೆಲೆ ಏರಿಕೆ ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ನೇತೃತ್ವದಲ್ಲಿ ಸೈಕಲ್ ಜಾಥಾ…

ಸುಳ್ಯ: ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಸ್ಟೆಕಲ್‌ ಜಾಥಾ ಮತ್ತು ಪಾದಯಾತ್ರೆ ಇಂದು (ಜು. 7) ನಡೆಯಿತು.
ಸುಳ್ಯ ಹಳೆಗೇಟು ಪೆಟ್ರೋಲ್‌ ಪಂಪ್‌ ಬಳಿಯಿಂದ ಸೈಕಲ್ ಜಾಥಾ ಮತ್ತು ಪಾದಯಾತ್ರೆ ಆರಂಭಗೊಂಡಿತು. ಸುಳ್ಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಸಿ.ಜಯರಾಮ ಯಾತ್ರೆಗೆ ಚಾಲನೆ ನೀಡಿದರು. ಇಂಧನ ಬೆಲೆ ಏರಿಕೆ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಸರಕಾರಗಳಿಗೆ ಎಚ್ಚರಿಕೆ ನೀಡುವ ದೃಷ್ಠಿಯಿಂದ ಪ್ರತಿಭಟನಾ ಯಾತ್ರೆ ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.
ಕೆಪಿಸಿಸಿ ಸುಳ್ಯ ಬ್ಲಾಕ್‌ ಉಸ್ತುವಾರಿ ಜಿ.ಕೃಷ್ಣಪ್ಪ , ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್‌, ಕೆಪಿಸಿಸಿ ಸದಸ್ಯ ಡಾ.ಬಿ.ರಘು , ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಮಾಜಿ ಕಾರ್ಯದರ್ಶಿ ಎಸ್‌.ಸಂಶುದ್ದೀನ್‌, ಅಲ್ಪ ಸಂಖ್ಯಾತ ಕಾಂಗ್ರೆಸ್‌ ರಾಜ್ಯ ಸಂಯೋಜಕ ತಾಜ್‌ ಮಹಮ್ಮದ್‌ ಸಂಪಾಜೆ , ಡಿಸಿಸಿ ಉಪಾಧ್ಯಕ್ಷ ಪಿ.ಎಸ್‌.ಗಂಗಾಧರ , ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ಕೋಲ್ಟಾರ್‌ , ಸಂಪಾಜೆ ವಲಯ ಕಾಂಗ್ರೆಸ್‌ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ , ಅಲ್ಪ ಸಂಖ್ಯಾತ ಘಟಕದ ಬ್ಲಾಕ್‌ ಅಧ್ಯಕ್ಷ ಜಿ.ಕೆ. ಹಮೀದ್‌, ಇಂಟೆಕ್‌ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಕಾರ್ಮಿಕ ಘಟಕದ ಅಧ್ಯಕ್ಷ ಸಚಿನ್‌ ರಾಜ್‌ ಶೆಟ್ಟಿ ಪೆರುವಾಜೆ ,ಕಿಸಾನ್‌ ಘಟಕದ ಅಧ್ಯಕ್ಷ ಸುರೇಶ್‌ ಅಮೈ , ಎಸ್‌ ಸಿ ಘಟಕದ ಅಧ್ಯಕ್ಷ ಆನಂದ ಬೆಳ್ಳಾರೆ, ಪ್ರಮುಖರಾದ ಕೆ.ಗೋಕುಲ್‌ ದಾಸ್‌, ಕೆ.ಎಂ.ಮುಸ್ತಫಾ, ಅಶೋಕ್‌ ಚೂಂತಾರು, ಸುಧೀರ್‌ ರೈ ಮೇನಾಲ, ಅನಿಲ್‌ ರೈ ಬೆಳ್ಳಾರೆ , ಬೆಟ್ಟ ಜಯರಾಮ್‌ ಭಟ್‌, ಭವಾನಿಶಂಕರ ಕಲ್ಮಡ್ಕ, ದಿನೇಶ್‌ ಅಂಬೆಕಲ್ಲು, ಸದಾನಂದ ಮಾವಜಿ, ರಹೀಂ ಬೀಜದಕಟ್ಟೆ, ಮಹಮ್ಮದ್‌ ಫವಾಜ್, ಮೂಸಾ
ಪೈ0ಬೆಚ್ಚಾಲ್, ಪ್ರಸಾದ್‌ ರೈ ಮೇನಾಲ, ನಂದರಾಜ ಸಂಕೇಶ , ಸಿದ್ಧಿಕ್‌ ಕೊಕ್ಕೋ, ಅಬೂಸಾಲಿ, ಎಸ್‌.ಕೆ.ಹನೀಫ
ಧೀರ ಕ್ರಾಸ್ತಾ, ನೌಷಾದ್‌ ಕೆರೆಮೂಲೆ, ಅನಿಲ್‌ ಬಳ್ಳಡ್ಕ, ಅಯ್ಯೂಬ್‌ ಗೂನಡ್ಕ ಮೀನಾಕ್ಷಿ ಮತ್ತಿತರರು ಭಾಗವಹಿಸಿದ್ದರು.

Sponsors

Related Articles

Back to top button