ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ- ಪೇರಡ್ಕದಲ್ಲಿ ನವೀಕರಣಗೊಂಡ ವಿಸ್ತೃತ ಮಸೀದಿ ಕಟ್ಟಡ ಉದ್ಘಾಟನೆ…

ಮಸೀದಿಯ ಪಾವಿತ್ರ್ಯತೆ ಯನ್ನು ಉಳಿಸುವುದು ನಮ್ಮ ಕರ್ತವ್ಯ - ಕೊಡಗು ಖಾಝಿ ಅಬ್ದುಲ್ಲಾ ಪೈಝಿ…

ಸುಳ್ಯ: ಮಸೀದಿಗಳು ನಮ್ಮ ಆರಾಧನಾ ಕೇಂದ್ರಗಳು ನಾವು ಭಯ ಭಕ್ತಿಯಿಂದ ಪ್ರಾರ್ಥಿಸಬೇಕಾಗಿದೆ. ಅವುಗಳ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಮಸೀದಿ ಪರಿಸರದಲ್ಲಿ ಅವುಲಿಯಾ ಗಳು ಮತ್ತು ಅವರ ಸಾನಿಧ್ಯ ಉರೂಸ್ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಭಾವನೆಗಳನ್ನು ಹೆಚ್ಚಿಸುತ್ತದೆ. ಸುಂದರವಾದ ಮಸೀದಿಯನ್ನು ನಿರ್ಮಿಸಿ ಪರಿಸರದಲ್ಲಿ ಪರಿಸರ ಸ್ನೇಹಿ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರವನ್ನು ಅಭಿವೃದ್ಧಿ ಪಡಿಸಿದಾಗ ಪ್ರಾರ್ಥನೆ ಮಾಡುವವರಿಗೆ ಕೂಡ ಮನಸ್ಸು ತುಂಬಿ ಬರುತ್ತದೆ ಪ್ರಾರ್ಥನಾ ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಮಸೀದಿಯನ್ನು ಅಭಿವೃದ್ಧಿ ಪಡಿಸುವುದು ಅಬಿನಂದನೀಯ ಎಂದು ಕೊಡಗು ಜಿಲ್ಲಾ ನಾಯಿಬ್ ಖಾಝಿ ಹಾಗು ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಹು| ಅಬ್ದುಲ್ಲಾ ಫೈಝಿ ಹೇಳಿದರು.
ಅವರು ಫೆಬ್ರವರಿ 18 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ- ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಯ ನವೀಕರಣ ಗೊಂಡ ವಿಸ್ಕ್ರತ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೇರಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷರು ಹಾಗು ಉರೂಸ್ ಸಮಿತಿಯ ಅಧ್ಯಕ್ಷರಾದ ಟಿ.ಎಂ ಶಾಹಿದ್ ತೆಕ್ಕಿಲ್ ಅವರು, ಪೇರಡ್ಕ ಮಸೀದಿಯು ಅತ್ಯಂತ ಪುರಾತನ ಮತ್ತು ಇತಿಹಾಸ ಇರುವ ಮಸೀದಿಯಾಗಿದೆ. ಇಲ್ಲಿ ಅನೇಕ ದೃಷ್ಟಾoತ ಗಳು ನಡೆದ ಬಗ್ಗೆ ಪುರಾವೆಗಳಿವೆ. ನನ್ನ ಅಜ್ಜ ತೆಕ್ಕಿಲ್ ಮೊಹಮ್ಮದ್ ಹಾಜಿಯವರಿಂದ ಹಿಡಿದು ತಂದೆ ಬಾಬಾ ಹಾಜಿ ಸಹಿತ ಅನೇಕ ಹಿರಿಯರು ಮಸೀದಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈಗ ಜಮಾಅತ್ ನ ಹಿರಿಯರ ಮಕ್ಕಳು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷವನ್ನುಂಟು ಮಾಡಿದೆ. ಮಸೀದಿಯ ವಿಸ್ತೃತ ಕಟ್ಟಡ, ಅಂಗಾಂಗ ಶುದ್ದೀಕರಣ ಕೇಂದ್ರ, ನೂತನ ಶೌಚಾಲಯ, ಯಾತ್ರಿಭವನ ಮುಂತಾದ ಅನೇಕ ಕಾಮಗಾರಿಗಳಾಗಿದ್ದು ,ಮುಂದೆಯು ತಮ್ಮಲ್ಲಾದ ಸಂಪೂರ್ಣ ಸಹಕಾರ ಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ ಮಾತನಾಡಿ ರಮಣೀಯವಾದ ಪ್ರಶಾಂತ ಸ್ಥಳ ಪೇರಡ್ಕದಲ್ಲಿ ಟಿ.ಎಂ ಶಾಹಿದ್ ತೆಕ್ಕಿಲ್ ಅವರ ಹಿರಿಯರು ತಂದೆ ಮತ್ತು ಅಜ್ಜ, ಕುಟುಂಬಸ್ಥರು ಜಮಾಅತ್ ಸದಸ್ಯರು ವಿಶೇಷವಾಗಿ ಯುವಕರು, ಹಿರಿಯರು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಅವರ ಮಾರ್ಗದರ್ಶನದಲ್ಲಿ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಗಿದೆ. ಇಂತಹ ನಾಯಕನನ್ನು ಪಡೆದ ತಾವುಗಳು ಪುಣ್ಯವಂತರು. ಟಿ.ಎಂ ಶಾಹಿದ್ ತೆಕ್ಕಿಲ್ ರವರು ನಾನು ಮಂಗಳೂರು ಬ್ಲಾಕ್ ಎನ್. ಎಸ್. ಯು. ಐ ಯ ಅಧ್ಯಕ್ಷ ನಾಗಿರುವಾಗಲೇ ರಾಜ್ಯ ಎನ್. ಎಸ್. ಯು. ಐ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಒಬ್ಬ ಶಾಸಕರು ಮಾಡುವ ಕೆಲಸಕ್ಕಿಂತ ಹೆಚ್ಚಾಗಿ ಈ ಪ್ರದೇಶಕ್ಕೆ ಅನುಧಾನವನ್ನು ತರಿಸಿ ಅಭಿವೃದ್ಧಿ ಕೆಲಸ ಮಾಡಿರುತ್ತಾರೆ ಅವರು ಯಾವಾಗಲೇ ಶಾಸಕರಾಗಬೇಕಿತ್ತು, ಮುಂದೆ ಆದಷ್ಟು ಬೇಗ ಉನ್ನತ ಹುದ್ದೆ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಮಸೀದಿಗೆ ನನ್ನಿಂದಾಗುವ ಸಹಾಯ ಸಹಕಾರವನ್ನು ಮಾಡುತ್ತೇನೆ ಎಂದರು.
ಪೇರಡ್ಕ ಜುಮಾ ಮಸೀದಿಯ ಖತೀಬರಾದ ಬಹು। ರಿಯಾಜ್ ಫೈಝಿ ದುವಾ ನೆರವೇರಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಮಸೀದಿಯ ಅಭಿವೃದ್ಧಿಗೆ ಹಿರಿಯರು ಯುವಕರು ಮತ್ತಿತರರ ಪರಿಶ್ರಮದಿಂದ ಸುಂದರವಾದ ಸುಸಜ್ಜಿತವಾದ ಶೌಚಾಲಯ ನಿರ್ಮಾಣಗೊಂಡಿದೆ ಇಡೀ ಸ್ಥಳಕ್ಕೆ ಕಂಪೌ೦ಡ್ ಮತ್ತು ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಪ್ರವಾಸಿ ತಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು ಅದ್ಭುತವಾದ ಕೆಲಸ ಆಗಿದೆ ಅದಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸುವುದಾಗಿ ಹೇಳಿದರು. ಸುಳ್ಯ ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹೆಚ್ ಕೆ.ಎಂ ಮುಸ್ತಫ, ಕಲ್ಲುಗುಂಡಿ ಜುಮಾ ಮಸೀದಿಯ ಅಧ್ಯಕ್ಷ ಹೆಚ್.ಈ. ಅಬ್ಬಾಸ್ ಸೆಂಟ್ಯಾರ್ ಸಂಪಾಜೆ ಬದ್ರ್ ಜುಮಾ ಮಸೀದಿಯ ಅಧ್ಯಕ್ಷ ತಾಜ್ ಮಹಮ್ಮದ್, ಅರಂತೋಡು ಜುಮಾ ಮಸೀದಿ ಅಧ್ಯಕ್ಷ ಅಶ್ರಪ್ ಗುಂಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇಧಿಕೆಯಲ್ಲಿ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ ಮಾಜಿ ಅಧ್ಯಕ್ಷರುಗಳಾದ ಟಿ.ಎಂ ಬಾಬಾ ಹಾಜಿ ತೆಕ್ಕಿಲ್, ಹಾಜಿ ಇಭ್ರಾಹೀಮ್ ಮೈಲುಕಲ್ಲು, ಟಿ.ಎ ಆರಿಫ್ ತೆಕ್ಕಿಲ್, ಕಾರ್ಯಾದರ್ಶಿ ಹಾಜಿ ಅಬ್ದುಲ್ ರಝಾಕ್ ತೆಕ್ಕಿಲ್, ನೂರುದ್ದಿನ್ ಅನ್ಸಾರಿ, ಹಂಸ ಮುಸ್ಲಿಯಾರ್, ಕೋಶಾಧಿಕಾರಿ ಪಿ.ಕೆ.ಉಮ್ಮರ್ ಗೂನಡ್ಕ, ಇಂಜಿನಿಯರ್ ನಾಸಿರ್ ಪೆರಾಜೆ, ಅಬ್ಬಾಸ್ ಪಾಂಡಿ , ತೆಕ್ಕಿಲ್ ಮಹಮ್ಮದ್ ಕುಂಇ’ ಪೇರಡ್ಕ, ಇಬ್ರಾಹಿಂ ಸೇಟ್ಯಡ್ಕ, ಸಾಜಿದ್ ಆಜ್ ಹರಿ ಮೊದಲಾದವರಿದ್ದರು ಅಬ್ದುಲ್ ಖಾದರ್ ಮೊಟ್ಟೆ೦ಗಾರ್ ವಂದಿಸಿದರು. ನೂತನವಾಗಿ ನಿರ್ಮಿಸಿದ ಶೌಚಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಕೇಂದ್ರಮುಶಾವರ ಸದಸ್ಯರಾಗಿ ಆಯ್ಕೆಯಾದ ಕೊಡಗು ಖಾಝಿ ಬಹು| ಅಬ್ದುಲ್ಲಾ ಫೈಝಿಯವರನ್ನು ಮತ್ತು ಕಟ್ಟಡ ವನ್ನು ಕ್ಲಪ್ತ ಸಮಯದಲ್ಲಿ ನಿರ್ಮಿಸಿಕೊಟ್ಟ ಇಂಜಿನಿಯರ್ ನಾಸಿರ್ ರವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

whatsapp image 2023 02 18 at 2.58.22 pm
whatsapp image 2023 02 18 at 2.58.32 pm
whatsapp image 2023 02 18 at 2.56.11 pm
whatsapp image 2023 02 18 at 3.00.33 pm
Sponsors

Related Articles

Back to top button