ಸುಳ್ಯ ವಿವಿಧ ಸಂಘ ಸಂಸ್ಥೆ ಗಳ ಪದಾಧಿಕಾರಿಗಳಿಂದ ಮರ್ಕಸ್ ನಾಲೆಡ್ಜ್ ಸಿಟಿ ಸಂದರ್ಶನ…

ಸುಳ್ಯ: ಕೇರಳದ ಕಲ್ಲಿಕೋಟೆಯಲ್ಲಿರುವ ವಿಶ್ವ ವಿಖ್ಯಾತ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ,ಸಮುಚ್ಚಯ ಮತ್ತು ಆಧುನಿಕ ಸಾಂಪ್ರದಾಯಿಕ ಚಿಕಿತ್ಸಾ ಸೌಲಭ್ಯ ದ ಹೆಲ್ತ್ ಸಿಟಿ ಯಾದ ಮರ್ಕಸ್ ನಾಲೆಡ್ಜ್ ಸಿಟಿ ಯನ್ನು ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಮುಸ್ಲಿಂ ಮುಖoಡರ ನಿಯೋಗ ಭೇಟಿ ನೀಡಿತು.
ಮರ್ಕಸ್ ಶಿಲ್ಪಿ ಸುಲ್ತಾನುಲ್ ಉಲಮ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರ ಸುಪುತ್ರ ಡಾ. ಹಕೀಮ್ ಆಜ್ಹರಿ ಯವರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಸುಳ್ಯ ತಾಲೂಕು ಸುನ್ನಿ ಜಂಇಯ್ಯತುಲ್ ಉಲಮ ಅಧ್ಯಕ್ಷರು ಅಸ್ಸಯ್ಯದ್ ಕುಂಞಕೋಯ ತಂಗಳ್, ರಾಜ್ಯ ಮದರಸ ಶಿಕ್ಷಕರ ಸಂಘದ ಖಜಾಂಚಿ ಇಬ್ರಾಹಿಂ ಸಖಾಫಿ ಪುಂಡೂರ್,ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಸುನ್ನಿ ಮ್ಯಾನೆಜ್ ಮೆಂಟ್ ಅಸೋಸಿಯೇಷನ್ ಜಿಲ್ಲಾ ಪದಾಧಿಕಾರಿ ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಅನ್ಸಾರಿಯ ಮ್ಯಾರೇಜ್ ಹಾಲ್ ನಿರ್ಮಾಣ ಸಮಿತಿ ಅಧ್ಯಕ್ಷ ಖಾದರ್ ಪಟೇಲ್, ಮುಸ್ಲಿಂ ಮುಖoಡ ರುಗಳಾದ ಉಮ್ಮರ್ ಹಾಜಿ ಮೆಟ್ರೋ, ಆಡ್ಕಾರ್ ಜುಮಾ ಮಸ್ಜಿದ್ ಉಪಾಧ್ಯಕ್ಷ ಸಂಶುದ್ದೀನ್ ಭಾರತ್, ಅನ್ಸಾರ್ ನಿರ್ದೇಶಕ ಅಬ್ದುಲ್ ಗಫಾರ್, ಗಾಂಧಿನಗರ ಮದರಸ ಶಿಕ್ಷಕರುಗಳಾದ ಲತೀಫ್ ಸಖಾಫಿ ಗೂನಡ್ಕ, ಇರ್ಫಾನ್, ಅಬ್ದುಲ್ ಖಾದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button