ಸುಳ್ಯ ಹವ್ಯಕ ವಲಯದ ಫೆಬ್ರವರಿ ತಿಂಗಳ ಶಾಸನತಂತ್ರ ಸಭೆ…
ಸುಳ್ಯ: ಸುಳ್ಯ ಹವ್ಯಕ ವಲಯದ ಪದಾಧಿಕಾರಿಗಳ ಫೆಬ್ರವರಿ ತಿಂಗಳ ಮಾಸಿಕ ಸಭೆಯು ಸುಳ್ಯಹವ್ಯಕ ವಲಯದ ಆಂಜನೇಯ ಘಟಕದ ಸತ್ಯ ಶಂಕರ.ಪಿ ಇವರ ಮನೆಯಲ್ಲಿ ಫೆ.2 ರಂದು ನಡೆಯಿತು.
ಧ್ವಜಾರೋಹಣ, ದೀಪೋಜ್ವಲನ, ಶಂಖನಾದ, ಗುರುವಂದನೆ, ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಹಾಗೂ ಗೋಸ್ತುತಿಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು.
ವಲಯ ಪದಾಧಿಕಾರಿಗಳು ವಿಭಾಗವಾರು ವರದಿ ಮಂಡಿಸಿದರು. ಬಳಿಕ ಕಾರ್ಯದರ್ಶಿಗಳಿಂದ ಸಂಘಟನೆಯ ಕಾರ್ಯಸೂಚಿ ವಿಷಯ ಮಂಡನೆಯಾಗಿ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ ಸಮಾಲೋಚನೆ ನಡೆಯಿತು.
ಮಹಾನಂದಿ ಗೋಲೋಕದಲ್ಲಿ ಮಾರ್ಚ್ 4ರಂದು *ಕೃಷ್ಣಾರ್ಪಣಮ್* ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಈ ಸಂದರ್ಭದಲ್ಲಿ ಛತ್ರ ಸಮರ್ಪಣೆ ಸೇವೆಯಲ್ಲಿ, ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ತೊಡಗಿಸಿಕೊಳ್ಳುವಂತೆ ಕೋರಲಾಯಿತು.ಎಲ್ಲಾ ಗುರಿಕ್ಕಾರರು ಮನೆಹಣವನ್ನು ಪಡೆದುಕೊಳ್ಳುವ ದಿನವನ್ನು ನಿಗದಿಪಡಿಸಿದಂತೆ ,ಆ ದಿನ ಬಹುತೇಕ ಎಲ್ಲಾ ಶಿಷ್ಯರು ಮನೆಹಣವನ್ನು ಸಲ್ಲಿಸಿರುವುದಾಗಿ ತಿಳಿಸಲಾಯಿತು.ಫೆಬ್ರವರಿ 17ರಂದು ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು ಭಾಗವಹಿಸುವಂತೆ ತಿಳಿಸಲಾಯಿತು.ವಲಯದ ವ್ಯಾಪ್ತಿಯಲ್ಲಿ ಬರುವ ಆಯುರ್ವೇದ ವೈದ್ಯರ ವಿವರ ಒದಗಿಸುವಂತೆ ಕೇಳಲಾಯಿತು.
ಗೋಕರ್ಣದ ಅಶೋಕೆಯಲ್ಲಿ ಸ್ಥಾಪಿತ ಗೊಳ್ಳಲಿರುವ ವಿಷ್ಣುಗುಪ್ತ ವಿದ್ಯಾಪೀಠಕ್ಕೆ ಡಾ ರಾಧಾಕೃಷ್ಣ ಕೆದಂಬಾಡಿ ಇವರು ರೂಪಾಯಿ 15 ಸಾವಿರ ಸಮರ್ಪಿಸಿದರು.ವಲಯದ 7 ಪದಾಧಿಕಾರಿಗಳು 6 ಗುರಿಕಾರರು ಮತ್ತು ಹವ್ಯಕ ಬಂಧುಗಳು ಸೇರಿದಂತೆ ಸುಮಾರು 25 ಜನ ಗುರು ಭಕ್ತರು ಹಾಜರಿದ್ದರು.
ವಲಯದ ಅಧ್ಯಕ್ಷ ಈಶ್ವರಕುಮಾರ ಉಬರಡ್ಕ ಸ್ವಾಗತಿಸಿದರು. ಕಾರ್ಯದರ್ಶಿ ವಿಷ್ಣು ಕಿರಣ ನೀರಬಿದಿರೆ ಪ್ರಾಸ್ತಾವಿಕ ನುಡಿಗಳನ್ನಾಡಿ ಗತ ಸಭೆಯ ವರದಿ ನೀಡಿ ಸಭಾ ನಿರ್ವಹಣೆ ಮಾಡಿದರು.ಕೋಶಾಧಿಕಾರಿ ಸರವು ಈಶ್ವರ ಭಟ್ ಲಕ್ಷ್ಮೀ ಶಾಖೆಯ ಲೆಕ್ಕ ಪತ್ರ ಮಂಡಿಸಿದರು.ರಾಮ ತಾರಕ ಜಪ, ಶಾಂತಿ ಮಂತ್ರ ದೊಂದಿಗೆ ಧ್ವಜಅವರೋಹಣ, ಶಂಖನಾದವಾಗಿ ಸಭೆಯು ಮುಕ್ತಾಯವಾಯಿತು.