ಸ್ತ್ತ್ರೀ ಶಕ್ತಿ ಸದಸ್ಯರ ಪ್ರತಿಭಾ ದಿನಾಚರಣೆ….
ಬಂಟ್ವಾಳ : ಚೈತನ್ಯ ಸ್ರ್ತಿಶಕ್ತಿ ಗೊಂಚಲು ಅಮ್ಟಾಡಿ ಮತ್ತು ನಿತ್ಯಶ್ರೀ ಸ್ರ್ತಿಶಕ್ತಿ ಗೊಂಚಲು ಕುರಿಯಾಳ ಇವರ ಸಂಯುಕ್ತ ಆಶ್ರಯದಲ್ಲಿ ಸ್ರ್ತಿಶಕ್ತಿ ಸದಸ್ಯರ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ಲೊರಟ್ಟೋ ಚರ್ಚ್ ಮಿನಿ ಹಾಲ್ ನಲ್ಲಿ ಶನಿವಾರ ನಡೆಯಿತು.
ಲೊರೆಟ್ಟೊ ಚರ್ಚ್ ನ ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ಇಡೊಲಿನ್ ಡಿ.ಸೋಜ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಹಿಳಾ ಶಕ್ತಿ ರಾಷ್ಟ್ರ ಶಕ್ತಿ. ಮಹಿಳೆಯರು ಸಂಘಟಿತರಾಗಿ ನಾಲ್ಕು ಗೋಡೆಗಳಿಂದ ಹೊರಬಂದಾಗ ಸಾಮಾಜಿಕ ಬದಲಾವಣೆ ಸಾಧ್ಯ. ಕೀಳರಿಮೆ ಬಿಡಿ , ಸ್ರ್ತಿಶಕ್ತಿ ಮೂಲಕ ಸಂಘಟನಾ ಶಕ್ತಿಯ ಮೂಲಕ ಬಲಾಢ್ಯಗೊಂಡು ಆರ್ಥಿಕ ವಾಗಿ ಸಬಲರಾಗಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಮಲ್ಲಿಕಾ ಶೆಟ್ಟಿ, ಅಂಗನವಾಡಿ ಕಾರ್ಯ ಕರ್ತೆಯರ , ಸಹಾಯಕಿಯರ ಸೇವೆ ನಿಜಕ್ಕೂ ಶ್ಲಾಘನೀಯ, ಅವರ ಸೇವೆಯನ್ನು ನಾವು ಮರೆಯುವಂತಿಲ್ಲ. ಸ್ತ್ರೀ ಶಕ್ತಿ ಸಂಘಟನೆ ನನ್ನ ವೈಯಕ್ತಿಕ ಬೆಳವಣಿಗೆ ಗೆ ಶಕ್ತಿಯಾಗಿದೆ. ಗೊಂಚಲು ಮೂಲಕ ನನ್ನ ಜೀವನ ರೂಪಿಸಿದ ಸಂತೋಷ ಇದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಜಾತಿ ಧರ್ಮ ರಾಜಕೀಯವನ್ನು ಮೀರಿ ನಿಂತು ಸಾಧನೆ ಮಾಡಿದಾಗ ಮಾತ್ರ ನಿಜವಾದ ನಾಯಕರಾಗುತ್ತಾರೆ, ಅಂತಹ ಮೇಲ್ಪಂಕ್ತಿಯನ್ನು ಅನುಸರಿಸಿ ಎತ್ತರಕ್ಕೆ ಬೆಳೆದವರು ಮಲ್ಲಿಕಾ ವಿ. ಶೆಟ್ಟಿ. ಮಹಿಳಾ ಸಂಘಟನೆಯ ಮೂಲಕ ಅನೇಕ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಎಲ್ಲರೂ ಸಂಘಟನೆಯ ಮೂಲಕ ಬಲವಂತರಾಗಿ ಎಂದು ಅವರು ತಿಳಿಸಿದರು.ಅವಕಾಶಕ್ಕಾಗಿ ಕಾಯದೆ ಅವಕಾಶವನ್ನು ಉಪಯೋಗಿಸುವ ಬುದ್ದಿವಂತಿಕೆ ಮಹಿಳೆಯರಿಂದ ಅಗಬೇಕು.ಸ್ರ್ತಿಶಕ್ತಿ ಸಂಘಟನೆ ಕಾರ್ಯಕ್ರಮ ಗಳ ಮೂಲಕ ಮಹಿಳಾ ಜಾಗೃತಿಯನ್ನು ಮೂಡಿಸಲಾಗಿದೆ. ಸ್ರ್ತಿಶಕ್ತಿ ಮೂಲಕ ಹಿಂಜರಿಕೆ ದೂರವಾಗಿ ಸಾಮಾಜಿಕ , ರಾಜಕೀಯ , ಶೈಕ್ಷಣಿಕ ಕ್ಷೇತ್ರದಲ್ಲಿ ಮಿಂಚಿದ್ದಾರೆ ಎಂದು ಪ್ರಭಾರ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಹೇಳಿದರು.
ಗ್ರಾ.ಪಂ.ಸದಸ್ಯ ರಾದ ಐರಿನ್ ಡಿ.ಸೋಜ, ರತಿ ಎಸ್.ಭಂಡಾರಿ, ಶ್ರೀಮತಿ, ಮೋಹಿನಿ, ಪೂರ್ಣಿಮಾ, ದೇವದಾಸ, ಸುರೇಂದ್ರ, ಶಾಲಾ ಶಿಕ್ಷಕ ಪದ್ಮನಾಭ ಮಯ್ಯ, ಸ್ರ್ತಿಶಕ್ತಿ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಗೀತಾಜಯತೀರ್ಥ ಉಪಸ್ಥಿತರಿದ್ದರು.
ಸ್ರ್ತಿಶಕ್ತಿ ಸಂಘಟನೆ ಮೂಲಕ ಸಾಧನೆ ಮಾಡಿದ ಮಲ್ಲಿಕಾ ಶೆಟ್ಟಿ ಅವರನ್ನು ಕಾರ್ಯಕ್ರಮದ ಲ್ಲಿ ಸನ್ಮಾನಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆ ಯರಿಗೆ ಸಹಾಯಕಿಯರಿಗೆ ಗೌರವ ಅರ್ಪಣೆ ನಡೆಯಿತು. ಪ್ರತಿಭಾ ದಿನಾಚರಣೆ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು ಸ್ರ್ತಿಶಕ್ತಿ ಸದಸ್ಯೆ ಯಶೋಧ ಸ್ವಾಗತಿಸಿ, ಕಾರ್ಯಕರ್ತೆ ಭವ್ಯ ಭಂಡಾರಿ ಬೆಟ್ಟು ವಂದಿಸಿದರು. ಸುಲೋಚನ ಆರ್.ಕುಲಾಲ್ ಕುಪ್ಪಿಲ ಕಾರ್ಯಕ್ರಮ ನಿರೂಪಿಸಿದರು.