ಸ.ಪ.ಪೂ.ಕಾಲೇಜು ಬಿ.ಮೂಡ – ಎನ್.ಎಸ್.ಎಸ್ ವಾರ್ಷಿಕ ಶಿಬಿರ….

ಬಂಟ್ವಾಳ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಸೈಂಟ್ ಜೇಕಬ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಫರ್ಲಾ ಇಲ್ಲಿ ನ.14 ರಿಂದ 20 ರ ತನಕ ಯಶಸ್ವಿಯಾಗಿ ನಡೆಯಿತು.
ಫರ್ಲಾ ಚರ್ಚ್‍ನ ಧರ್ಮಗುರುಗಳಾದ ಕ್ಲೋಡ್ ವಾಸ್ ಅವರ ಉಪಸ್ಥಿತಿಯಲ್ಲಿ ಶಿಬಿರವನ್ನು ಬಂಟ್ವಾಳ ತಾ.ಪಂ ಸದಸ್ಯರಾದ ಸಪ್ನಾ ವಿಶ್ವನಾಥ ಪೂಜಾರಿ ಉದ್ಘಾಟಿಸಿದರು. ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಚಂದಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳು ವಿವಿಧ ಕೆಲಸಗಳನ್ನು ನಿರ್ವಹಿಸುವ ಉದ್ದೇಶದಿಂದ ನಾಲ್ಕು ಗುಂಪುಗಳನ್ನು ರಚಿಸಿ ಅವರಿಗೆ ಅಡುಗೆ ಸಹಾಯ, ದೈನಂದಿನ ಸ್ವಚ್ಛತೆ, ಸಾಂಸ್ಕøತಿಕ ಕಾರ್ಯಕ್ರಮ ನಿರ್ವಹಣೆ ಮತ್ತು ಶ್ರಮದಾನ ಜವಾಬ್ದಾರಿಗಳನ್ನು ಹಂಚಲಾಗಿತ್ತು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಶ್ರಮದ ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಫರ್ಲಾ ಶಾಲೆಯ ಆಟದ ಮೈದಾನವನ್ನು ಸ್ವಚ್ಛಗೊಳಿಸುವುದು, ಉದ್ದ ಜಿಗಿತದ ಪಿಟ್ ತಯಾರಿಸುವುದು, ಸಾವಯವ ಕೃಷಿಗಾಗಿ ಹುಂಡಿಗಳನ್ನು ನಿರ್ಮಿಸುವುದು, ಶಾಲಾ ಆವರಣದಲ್ಲಿ ಹೂದೋಟ ನಿರ್ಮಾಣ, ಫರ್ಲಾ ಶಾಲೆಯಿಂದ ನಾವೂರು ರಸ್ತೆ ಮತ್ತು ಹೆದ್ದಾರಿವರೆಗಿನ ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತೆ ಕಾರ್ಯಗಳನ್ನು ಕೈಗೊಳ್ಳಲಾಯಿತು. ಬೌದ್ಧಿಕ ವಿಕಸನದ ಉದ್ದೇಶದಿಂದ ವ್ಯಕ್ತಿತ್ವ ವಿಕಸನ, ಶಿಕ್ಷಣದಲ್ಲಿ ರಂಗಕಲೆ, ಚಟುವಟಿಕೆಯಾಧಾರಿತ ಕಲಿಕೆ, ಪವಾಡ ರಹಸ್ಯ ಬಯಲು, ಕ್ರಾಫ್ಟ್ ತಯಾರಿಕೆ ಇವೇ ಮೊದಲಾದ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ನಾಯಕತ್ವ, ಸಮಾಜಸೇವೆ, ಸಹಜೀವನ, ಜಾತ್ಯತೀತ ಮನೋಭಾವ, ಸೇವಾ ಭಾವನೆ, ಸೌಹಾರ್ಧತೆ, ರಾಷ್ಟ್ರೀಯ ಭಾವೈಕ್ಯತೆ ಇವೇ ಮೊದಲಾದ ಉದ್ದೇಶಗಳನ್ನು ಈಡೇರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಸ್ ಎಲ್.ರೊಡ್ರಿಗಸ್ ಅವರು ಸಮಾರೋಪ ಭಾಷಣ ಮಾಡಿದರು. ಬಿ.ಮೂಡ ಕಾಲೇಜಿನ ಪ್ರಾಚಾರ್ಯರಾದ ಯೂಸುಫ್ ವಿಟ್ಲ, ಸಂಸ್ಥೆಯ ಮುಖ್ಯ ಶಿಕ್ಷಕಿ ಜೆಸಿಂತ ತೆರೆಜಾ ಡಿ’ಸೋಜ, ಎನ್.ಎಸ್.ಎಸ್. ಶಿಬಿರಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ, ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್, ದಾಮೋದರ ಇ, ಲವೀನಾ ಶಾಂತಿ ಲೋಬೋ, ಆಶಾಲತಾ, ದಿವ್ಯ ಉಪಸ್ಥಿತರಿದ್ದು ಶಿಬಿರಕ್ಕೆ ಮಾರ್ಗದರ್ಶನ ಮಾಡಿದರು. ಕಾಲೇಜು ಸಿಬ್ಬಂದಿಗಳಾದ ಭಾಗ್ಯಶ್ರೀ, ಕಮಲಾಕ್ಷಿ ಸಹಕರಿಸಿದರು. ಫರ್ಲಾ ಚರ್ಚ್‍ನ ಅನೇಕ ಸಂಘಟನೆಗಳ ಸದಸ್ಯರು, ಬಿ.ಮೂಡ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಫರ್ಲಾ ಶಾಲೆಯ ವಿದ್ಯಾರ್ಥಿ ಪೋಷಕರ ಸಹಕಾರದೊಂದಿಗೆ ಈ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

Sponsors

Related Articles

Leave a Reply

Your email address will not be published. Required fields are marked *

Back to top button