ಕಾಲೇಜುಗಳಿಗೆ 15ದಿನ ರಜೆ – ಸುಳ್ಳು ಸುದ್ದಿ….

ಮಂಗಳೂರು: ಕಾಲೇಜುಗಳಿಗೆ 15 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ ಎನ್ನುವ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು , ಇದು ಅಪ್ಪಟ ಸುಳ್ಳು ಸುದ್ದಿಯಾಗಿದೆ . ಇಂತಹ ಯಾವುದೇ ವಿಚಾರ ಇಲ್ಲ . ಯಾವುದೇ ರಜೆ ಕೂಡ ಘೋಷಣೆ ಮಾಡಿಲ್ಲ . ಇದನ್ನು ಸುಳ್ಳು ಸುದ್ದಿಯಾಗಿ ಪರಿಗಣಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ . ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಈ ಹಿಂದಿನ ಸುತ್ತೋಲೆಯನ್ನು ತಿದ್ದುಪಡಿ ಮಾಡಿಕೊಂಡು ಸುಳ್ಳು ಸುದ್ದಿಯನ್ನು ಹರಡಿಸಲಾಗುತ್ತಿದೆ . ಈಗಾಗಲೇ ರಾಜ್ಯದ ಎಲ್ಲ ಕಾಲೇಜಿನ ಪ್ರಿನ್ಸಿಪಾಲರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು , ಇದು ಪೂರ್ಣ ಸುಳ್ಳು ಸುದ್ದಿ ಇದನ್ನು ಮಾಡಿದವರ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ . ಯಾವುದೇ ರೀತಿಯ ಸಂವಹನ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ವನ್ನು ಗಮನಿಸಿಕೊಳ್ಳಿ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button