ಯಕ್ಷಗಾನ ಕಾಳಮದ್ದಳೆ ಸಪ್ತಾಹ ಕರೆಯೋಲೆ ಬಿಡುಗಡೆ…

ತಾಳಮದ್ದಳೆ ನುಡಿ ಹಬ್ಬ ಯಕ್ಷಾಂಗಣದ ಕೊಡುಗೆ: ಡಾ.ಎ.ಜೆ ಶೆಟ್ಟಿ...

ಮಂಗಳೂರು: ‘ಕರ್ನಾಟಕದಲ್ಲಿ ಪರಿಶುದ್ಧವಾದ ಕನ್ನಡ ಭಾಷೆಯನ್ನು ಬಳಸುವ ಒಂದು ಕಲಾಪ್ರಕಾರವಿದ್ದರೆ ಅದು ಯಕ್ಷಗಾನ ಮಾತ್ರ. ಕಳೆದ ಹತ್ತು ವರ್ಷಗಳಿಂದ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಪ್ರತಿ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ ಯಕ್ಷಗಾನ ತಾಳಮದ್ದಳೆಯ ನುಡಿ ಹಬ್ಬ ಕನ್ನಡ ಜನತೆಗೆ ಯಕ್ಷಾಂಗಣದ ಮಹೋನ್ನತ ಕೊಡುಗೆ. ಅದಕ್ಕಾಗಿ ಈ ಬಾರಿ ಹನ್ನೊಂದನೇ ಸಪ್ತಾಹವು ಕಲಾಭಿಮಾನಿಗಳ ಪ್ರೋತ್ಸಾಹದಿಂದ ಯಶಸ್ವಿಯಾಗಲಿ’ ಎಂದು ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಹೇಳಿದ್ದಾರೆ‌
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ 19 ರಿಂದ 25 ರವರೆಗೆ ಮಂಗಳೂರಿನಲ್ಲಿ ಆಯೋಜಿಸಿದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023: ಶ್ರೀಹರಿ ಚರಿತ್ರೆ’ ಸರಣಿಯ ಕರೆಯೋಲೆಯನ್ನು ಕದ್ರಿ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಮಹೇಶ್ ಮೋಟರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಶುಭ ಹಾರೈಸಿದರು.
ಯಶಸ್ಸಿಗೆ ಪ್ರಾರ್ಥನೆ:
ದೇವರ ಮುಂದೆ ಆಮಂತ್ರಣ ಪತ್ರಿಕೆಯನ್ನಿರಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು.
ಉಪಾಧ್ಯಕ್ಷರುಗಳಾದ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ.ರವೀಂದ್ರ ರೈ ಕಲ್ಲಿಮಾರು, ಕಾರ್ಯದರ್ಶಿ ಉಮೇಶ ಆಚಾರ್ಯ ಗೇರುಕಟ್ಟೆ, ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ನಿವೇದಿತಾ ಎನ್. ಶೆಟ್ಟಿ, ಸುಮಾ ಪ್ರಸಾದ್ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

whatsapp image 2023 11 14 at 2.41.28 pm

Sponsors

Related Articles

Back to top button