ಸುದ್ದಿ

ಬಂಟ್ವಾಳ- 3.33 ಕೋ.ರೂ.ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ…

ಬಂಟ್ವಾಳ: ಸಾಮಾನ್ಯರು ಹೋಗುವ ರಸ್ತೆಗಳು ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚಿನ ಅನುದಾನದ ಮೂಲಕ ಅಭಿವೃದ್ಧಿಗೊಳ್ಳುತ್ತಿದ್ದು, ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳ ಕುರಿತು ಶಾಸಕರ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಆರ್.ಎಸ್. ಎಸ್.ಮುಂದಾಳು ಡಾ.ಪ್ರಭಾಕರ ಭಟ್ ಹೇಳಿದರು.
ಅವರು ಬಾಳ್ತಿಲ ಗ್ರಾಮದ ಸುಧೆಕ್ಕಾರ್- ಚೆಂಡೆ ಸಂಪರ್ಕ ರಸ್ತೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ 3.33 ಕೋ.ರೂ.ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಶಾಸಕ ರಾಜೇಶ್ ನಾಯ್ಕ್, ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ೪ ವರ್ಷಗಳ ದೊಡ್ಡ ಕೆಲಸಗಳ ಜತೆಗೆ ಸಣ್ಣಪುಟ್ಟ ಕಾಮಗಾರಿಗಳ ಕುರಿತು ಕೂಡ ವಿಶೇಷ ಗಮನ ಹರಿಸಲಾಗಿದೆ. 14 ಕೋ.ರೂ.ಗಳಷ್ಟು ಅನುದಾನವನ್ನು ಬಾಳ್ತಿಲ ಗ್ರಾಮಕ್ಕೆ ತರಲಾಗಿದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮನಾಥ ರಾಯಿ, ಜಿ.ಪಂ.ಮಾಜಿ ಸದಸ್ಯರಾದ ಚೆನ್ನಪ್ಪ ಆರ್.ಕೋಟ್ಯಾನ್, ಕಮಲಾಕ್ಷಿ ಪೂಜಾರಿ, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಶಿವರಾಜ್, ಮಮತಾ, ಚಂದ್ರಶೇಖರ, ರಾಜೇಶ್, ಲತೀಶ್ ಕುಮಾರ್, ಚೈತ್ರಾ, ಹರಿಣಾಕ್ಷಿ, ಪ್ರಮುಖರಾದ ಮೋಹನ್ ಪಿ.ಎಸ್, ದಿನೇಶ್ ಅಮ್ಟೂರು, ಆನಂದ ಎ.ಶಂಭೂರು, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ್ ಬಜ, ಕಾರ್ತಿಕ್ ಬಳ್ಳಾಲ್, ಪುರುಷೋತ್ತಮ ಶೆಟ್ಟಿ, ಕುಶಲ ಚೆಂಡೆ, ಕ.ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ವಿಠಲ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button