ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ “ಮೋಟಾರು ವಾಹನ ಕಾಯ್ದೆ” ಮಾಹಿತಿ ಕಾರ್ಯಾಗಾರ…

ಬಂಟ್ವಾಳ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ವಿದ್ಯಾರ್ಥಿ ಮಾರ್ಗದರ್ಶನ ಘಟಕದ ವತಿಯಿಂದ “ಮೋಟಾರು ವಾಹನ ಕಾಯ್ದೆ” ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ನ್ಯಾಯಾವಾದಿಗಳಾದ ಶ್ರೀ ವೆಂಕಟ್ರಮಣ ಭಟ್ ಕಮ್ಮಾಜೆ ಇವರು ಮೋಟಾರು ವಾಹನಗಳ ಚಾಲಕರು ವಹಿಸಬೇಕಾದ ಮುಂಜಾಗರೂಕತೆ, ರಸ್ತೆ ನಿಯಮಗಳ ಅರಿವು, ಹಾಗೂ ವಾಹನದಲ್ಲಿರಬೇಕಾದ ದಾಖಲೆಗಳು ಇತ್ಯಾದಿಗಳ ಬಗೆಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮ ಸಡಕ್ ರಸ್ತೆಗಳನ್ನು ಗುರುತಿಸುವ ಸಂಕೇತಗಳು ಹಾಗೂ ನೂತನವಾಗಿ ಕೇಂದ್ರ ಸರಕಾರವು ಜಾರಿಗೊಳಿಸಲು ಉದ್ದೇಶದಿಂದ ದಂಡ ನೀತಿಗಳ ಬಗೆಗೂ ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಪದವಿ ವಿಭಾಗದ ಪ್ರಾಚಾರ್ಯರಾದ ಶ್ರೀ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಮತ್ತು ವಿದ್ಯಾರ್ಥಿ ಮಾರ್ಗದರ್ಶನ ಘಟಕದ ನಿರ್ದೇಶಕಿ ಶ್ರೀಮತಿ ಕವಿತಾ ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀ ಯತಿರಾಜ ಪೆರಾಜೆ ಸ್ವಾಗತಿಸಿ,ನಿರೂಪಿಸಿ ವಂದಿಸಿದರು.

Sponsors

Related Articles

Back to top button