ಉತ್ತಮ ಸಾಹಿತ್ಯದಿಂದ ಸೃಜನಶೀಲ ಸಮಾಜ ನಿರ್ಮಾಣ ಸಾಧ್ಯ – ವಿ.‌ಸುಬ್ರಹ್ಮಣ್ಯ ಭಟ್…

ಬಂಟ್ವಾಳ:ಉತ್ತಮ ಸಾಹಿತ್ಯದಿಂದ ಸೃಜನಶೀಲ ಸಮಾಜ ನಿರ್ಮಾಣ ಸಾಧ್ಯ. ಸಾಹಿತ್ಯದ ಚಿತ್ತ ಹಳ್ಳಿಯತ್ತ ಹೋದರೆ ಹೆಚ್ಚು ಸಾಹಿತ್ಯ ಕೃಷಿ ಆದೀತು. ಮಕ್ಕಳಲ್ಲಿ ಸಾಹಿತ್ಯದ ಜಾಗೃತಿ ಮೂಡಿಸಲು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಉಪನ್ಯಾಸಕರಾಗಿರುವ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಗೌರವ ಕಾರ್ಯದರ್ಶಿ ವಿ.‌ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ನೇರಳಕಟ್ಟೆಯ ನೆಟ್ಲ ಮುಡ್ನೂರು ಗ್ರಾಮ ಸಭಾವನದಲ್ಲಿ ಪಂಚಾಯತ್ ಸಹಯೋಗದಲ್ಲಿ ದ.ಕ. ಜಿ. ಕನ್ನಡ ಸಾಹಿತ್ಯ ಪರಿಷತ್ತು , ಬಂಟ್ವಾಳ ತಾಲೂಕು‌ಘಡಕ ಮತ್ತು ಪುತ್ತೂರಿನ ಚಿಗುರೆಲೆ ಸಾಹಿತ್ಯ ಬಳಗ ವತಿಯಿಂದ ಹಳ್ಳಿಯತ್ತ ಸಾಹಿತ್ಯ ಚಿತ್ತ ಅಂಗವಾಗಿ ನಡೆದ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಹೆಚ್ಚು ಅಧ್ಯಯನಶೀಲರಾಗಿ ಬರೆಯಿರಿ. ‌ಕೃತಿಚೌರ್ಯ ಮಾಡದಿರಿ. ಆರೋಗ್ಯ ‌ಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತ್ಯದ ಕೊಡುಗೆ ಇರಲಿ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಅವರು ಕವಿತೆ, ಚುಟುಕುಗಳನ್ನು ಉದಾಹರಣೆ ನೀಡಿ ಸಾಹಿತ್ಯಾಸಕ್ತರಲ್ಲಿ ಲವಲವಿಕೆ ತುಂಬಿದರು.

ಕಸಾಪದಿಂದ ನಿರಂತರ ಪ್ರೋತ್ಸಾಹ

ಕನ್ನಡ ಸಾಹಿತ್ಯ ಪರಿಷತ್ತು ನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿ, ಸಾಹಿತ್ಯ ಮತ್ತು ಸಾಹಿತ್ಯ ಸಂಘಟನೆಗಳಿಗೆ ನಿರಂತರ ಪ್ರೋತ್ಸಾಹ ಇದೆ ಎಂದರು. ಸಾಹಿತ್ಯ ಪರಿಷತ್ತು ಸಾಹಿತಿಗಳ ಜತೆ ಸದಾ ಇದೆ. ಕನ್ನಡ ಸಾಹಿತ್ಯ ಪರಿಷತ್ತು ಜನಾಭಿಮುಖವಾಗಿ ಇದೆ ಎಂದು ವಿಶ್ವನಾಥ ಬಂಟ್ವಾಳ ತಿಳಿಸಿದರು.

ಕವಿತೆಗೆ ನಿಖರ ವಿವರಣೆ ಇರುವುದಿಲ್ಲ

ಕವಿತೆಗೆ ನಿಖರವಾದ ವಿವರಣೆಯೊಂದು ಇರುವುದಿಲ್ಲ. ಹಿಂದಿನ ಕಾಲದಲ್ಲಿ ಕವಿತೆಯ ವಸ್ತುಗಳು ಹೀಗಿರಬೇಕು, ಕವಿತೆ ಛಂದೋಬದ್ಧ, ಅದರಲ್ಲಿ ಉಪಮೆ, ರೂಪಕ, ಅಲಂಕಾರಗಳಿರಬೇಕು, ಪ್ರಾಸಗಳಿರಬೇಕು, ಮಧುರ ಭಾವನೆಗಳು ಮತ್ತು ಲಯಗಳಿರಬೇಕು ಎಂಬ ಸೂತ್ರಗಳಿದ್ದವುಎಂದು ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಡೊಂಬಯ್ಯ ಇಡ್ಕಿದು ಹೇಳಿದರು. ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವನದಲ್ಲಿ ರೂಪಕಗಳ ಮೇಲೆ ರೂಪಕಗಳನ್ನು ತಂದರೆ ಅದೂ ಬಹಳ ಕೃತಕವಾಗಿ ಅನಿಸುತ್ತದೆ.ಮುಕ್ತಛಂದಕ ವನ್ನು ಬಹಳ ಕಲಾತ್ಮಕವಾಗಿ ಬಳಸಿದ ಟಿ.ಎಸ್‌. ಎಲಿಯಟ್ಟ, ಛಂದೋಬದ್ಧವಾಗಿ ಬರೆದ ಶೇಕ್ಸ್‌ಪಿಯರ್‌ ಛಂದೋಬದ್ಧತೆಯನ್ನು ಆಗಾಗ ಮೀರುವುದರಲ್ಲೇ ಖುಷಿಯನ್ನು ಕಂಡುಕೊಂಡವರು ಎಂದರು

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಸಚ್ಚಿದಾನಂದ, ರಂಗ ಕಲಾವಿದೆ ವಸಂತಲಕ್ಷ್ಮೀ, ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ, ಶಶಿಧರ ಏಮಾಜೆ, ದೀಪ್ತಿ ಅಡ್ಡಂತ್ತಡ್ಕ, ಸುಪ್ರೀತಾ ಚರಣ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ಹಿರಿಯ ,ವಿಟ್ಲ ಹೋಬಳಿ ಕಸಾಪ ಅಧ್ಯಕ್ಷರಾಗಿರುವ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು, ಕಸಾಪ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಮತ್ತಿತರರು ಭಾಗವಹಿಸಿದ್ದರು. ಸುಮಾರು 30ಕ್ಕೂ ಹೆಚ್ಚು ಕವಿಗಳು ಕವನ ಪ್ರಸ್ತುತ ಪಡಿಸಿದರು.

Sponsors

Related Articles

Back to top button