ಸುದ್ದಿ

ದೇಶಾದ್ಯಂತ ರೂಪಾಂತರಿ ಕೊರೋನಾ ವೈರಸ್ ನ 6 ಪ್ರಕರಣಗಳು ಪತ್ತೆ…

ಬೆಂಗಳೂರು: ಬ್ರಿಟನ್ ನಿಂದ ಭಾರತಕ್ಕೆ ವಾಪಸ್ಸಾದವರ ಪೈಕಿ 6 ಮಂದಿಯಲ್ಲಿ ರೂಪಾಂತರಗೊಂಡ ವೈರಾಣು ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢೀಕರಿಸಿದೆ.
ಬೆಂಗಳೂರಿಗೆ ಬ್ರಿಟನ್ ನಿಂದ ಆಗಮಿಸಿದ್ದವರ ಸ್ಯಾಂಪಲ್ ಗಳನ್ನು ನಿಮ್ಹಾನ್ಸ್ ಗೆ ಕಳಿಸಿಕೊಡಲಾಗಿತ್ತು. ಈ ಪೈಕಿ ಬೆಂಗಳೂರಿನಲ್ಲಿ ಮೂರು ಪ್ರಕರಣಗಳು, ಹೈದರಾಬಾದ್ ನಲ್ಲಿ ಎರಡು ಪ್ರಕರಣಗಳು ಹಾಗೂ ಪುಣೆಯಲ್ಲಿ ಒಂದು ರೂಪಾಂತರಗೊಂಡ ಪ್ರಕರಣಗಳು ಪತ್ತೆಯಾಗಿದೆ.
ನ.25 ರಿಂದ ಡಿ.23 ವರೆಗೆ 33,000 ಪ್ರಯಾಣಿಕರು ಭಾರತದ ವಿವಿಧ ಏರ್ ಪೋರ್ಟ್ ಗಳಿಗೆ ಬ್ರಿಟನ್ ನಿಂದ ಅಗಮಿಸಿದ್ದರು. ಈ ಎಲ್ಲಾ ಪ್ರಯಾಣಿಕರನ್ನು ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿವೆ. ಈ ಪೈಕಿ 114 ಮಂದಿಯಲ್ಲಿ ಸಾಮಾನ್ಯವಾದ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

Related Articles

Leave a Reply

Your email address will not be published.

Back to top button