ಅ.1 – ಸುಳ್ಯ ದಲ್ಲಿ ವಕ್ಫ್ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಮಾಹಿತಿ ಕಾರ್ಯಗಾರ..

ಸಚಿವರು, ಆಯೋಗದ ಅಧ್ಯಕ್ಷರು, ವಕ್ಫ್ ಅಧ್ಯಕ್ಷರು ಸುಳ್ಯಕ್ಕೆ....

ಸುಳ್ಯ: ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮತ್ತು ಸುಳ್ಯ ತಾಲೂಕು ಜಮಾಅತ್ ಸಮನ್ವಯ ಸಮಿತಿ ಆಶ್ರಯದಲ್ಲಿ ವಕ್ಫ್ಇಲಾಖೆ, ಕಂದಾಯ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕಾರ್ಮಿಕ ಇಲಾಖೆ, ಅರೋಗ್ಯ ಇಲಾಖೆಗಳ ಮಾಹಿತಿ ಕಾರ್ಯಗಾರ ಅ.1 ರಂದು ಅನ್ಸಾರಿಯ ಸಭಾಂಗಣ ನಾವೂರು ಇಲ್ಲಿ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 2 ಗಂಟೆ ತನಕ ನಡೆಯಲಿದ್ದು, ಅಲ್ಪಸಂಖ್ಯಾತರ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಕ್ರಮ ದಲ್ಲಿ ಸುಳ್ಯ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಬಂದರು, ಮೀನುಗಾರಿಕೆ,ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್, ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲನಾ ಶಾಫಿ ಸಆದಿ, ಮಾಜಿ ಸಚಿವ, ಹಾಲಿ ಶಾಸಕರಾದ ಯು ಟಿ ಖಾದರ್, ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಬಿ ಎಂ ಫಾರೂಕ್, ಕರ್ನಾಟಕ ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಹಿದಾಯತುಲ್ಲಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಎಂ ಡಿ ನಜೀರ್ ಅಹ್ಮದ್, ವಕ್ಫ್ ಅಪರ ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಖಾದರ್ ಶಾ,ಅಪರ ಜಿಲ್ಲಾಧಿಕಾರಿ ಡಾ, ಕೃಷ್ಣಮೂರ್ತಿ, ಪುತ್ತೂರು ವಿಭಾಗಾಧಿಕಾರಿ , ಗಿರೀಶ್ ನಂದನ್ ಎಂ, ಪುತ್ತೂರು ಪೊಲೀಸ್ ಅಧಿಕಾರಿ ಡಾ. ವೀರಣ್ಣ ಹೀರೇಮಠ್, ರಾಜ್ಯ ವಕ್ಫ್ ಕೌನ್ಸಿಲ್ ಮಾಜಿ ಸದಸ್ಯರುಗಳಾದ ಟಿ ಎಂ ಶಹೀದ್, ಎಸ್ ಸಂಶುದ್ದಿನ್, ಜಿಲ್ಲಾ ವಕ್ಫ್ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್,
ವಕ್ಫ್ ಅಧಿಕಾರಿ ಮುಅಝೀನ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜೇಮ್ಸ್ ಕುಟಿನ್ಹ, ಜಿಲ್ಲಾ ಕೆಎಂಡಿಸಿ ವ್ಯವಸ್ಥಾಪಕ ಯಶೋದರ, ಹಿರಿಯ ಕಾರ್ಮಿಕ ಅಧಿಕಾರಿ ಗಣಪತಿ ಹೆಗ್ಡೆ, ಪೊಲೀಸ್ ವೃತ್ತ ನಿರೀಕ್ಷಕರಾದ ನವೀನಚಂದ್ರ ಜೋಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ತಹಶೀಲ್ದಾರ್ ಅನಿತಾ ಲಕ್ಸ್ಮಿ, ಅಡ್ವೋಕೇಟ್ ಹನೀಫ್ ಹುದವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಮನ್ವಯ ಸಮಿತಿ ಸಂಚಾಲಕ ಕೆಎಂ ಮುಸ್ತಫ. ಸ್ವಾಗತ ಸಮಿತಿ ಸಂಚಾಲಕ ಮಹಮ್ಮದ್ ಇಕ್ಬಾಲ್ ಎಲಿಮಲೆ , ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮೊಗರ್ಪಣೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ,
ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಂಡಿರುತ್ತಾರೆ.

Sponsors

Related Articles

Back to top button