ಏ.25 ರಿಂದ ಏ.29 – ಕಳ್ಳಿಗೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ…

ಬಂಟ್ವಾಳ: ಬ್ರಹ್ಮರಕೂಟ್ಲು ಜಾರಂದಗುಡ್ಡೆ ಸುರಭಿ ಭವನದಲ್ಲಿ ಚಿಣ್ಣರ ಬೇಸಿಗೆ ಶಿಬಿರವನ್ನು ಏ.25 ರಿಂದ ಏ.29 ರವರೆಗೆ ಏರ್ಪಡಿಸಲಾಗಿದೆ.
2ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು 5 ದಿನಗಳ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ನೃತ್ಯ , ಪೇಪರ್ ಕ್ರ್ಯಾಪ್ಟ್, ರಂಗಾಟ, ಅಭಿನಯ , ಡಿಬೇಟ್, ಮುಖವಾಡ ತಯಾರಿ ಸೇರಿದಂತೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು. ಬಂಟ್ವಾಳ ನೇತ್ರಾವತಿ ಸಂಗಮ ಮತ್ತು ಶ್ರೀ ಲಕ್ಷ್ಮೀ ವಿಷ್ಣು ಸೇವಾ ಸಂಘ ಜಾರಂದಗುಡ್ಡೆ ಕಳ್ಳಿಗೆ ಇವರ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ ಎಂದು ಸಂಯೋಜಕರಾದ ಜಯಾನಂದ ಪೆರಾಜೆ ಮತ್ತು ಉಮಾಶಂಕರ್ ಅಮೀನ್ ಜಾರಂದಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button