ಸಂಪಾಜೆಯ ಪ್ರವಾಹ ಪೀಡಿತರಿಗೆ ಮತ್ತು ಸುಬ್ರಹ್ಮಣ್ಯದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಸೂಕ್ತ ಪರಿಹಾರ – ಕಾಂಗ್ರೇಸ್ ಮುಖಂಡ ಟಿ.ಎಮ್ ಶಹೀದ್‌ ತೆಕ್ಕಿಲ್ ಒತ್ತಾಯ…

ಸುಳ್ಯ: ಕೊಡಗು ಸಂಪಾಜೆ ಗಡಿ ಭಾಗದ ಪರಿಸರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಜಲಸ್ಪೋಟಗೊಂಡು, ಕಲ್ಲುಗುಂಡಿ ಮುಖ್ಯರಸೆಯಲ್ಲಿ ರಾತ್ರಿ ಏಕಾಏಕಿ ನೀರು ನುಗ್ಗಿದ ಪರಿಣಾಮ ಹಲವಾರು ಮನೆಗಳು ಜಲಾವೃತಗೊಂಡು ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಹಾಗೂ ಅಂಗಡಿ ಮುಂಗಟ್ಟುಗಳೂ ಕೂಡ ನೀರಿನಿಂದ ಆವೃತಗೊಂಡು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ. ತಮ್ಮ ಎಲ್ಲಾ ವಸ್ತುಗಳನ್ನು ಕಳೆದುಕೊಂಡ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಪರಿಹಾರವನ್ನು ನೀಡಬೇಬೇಕೆಂದು ಒತ್ತಾಯಿಸಿದ್ದಾರೆ. ಇತಿಹಾಸ ಪ್ರಸಿದ್ದ ಪೇರಡ್ಕ ದರ್ಗಾ ಷರೀಫ್ ಮತ್ತು ಆನೇಕ ಮನೆಗಳು, ಕೃಷಿ ಭೂಮಿ, ವಾಹನಗಳಿಗೆ ಪ್ರವಾಹದಿಂದ ನಷ್ಟ ಆಗಿದ್ದು ಸರಕಾರದ ತಕ್ಷಣವೇ ಸ್ಪಂದಿಸಿ ತುರ್ತು ಪರಿಹಾರ ನೀಡಬೇಕಾಗಿದೆ.
ಅಲ್ಲದೆ ಕುಕ್ಕೆಸುಬ್ರಹ್ಮಣ್ಯದ ಪರಿಸರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅನಾಹುತ ಸಂಭವಿಸಿ 11 ವರ್ಷದ ಶ್ರುತಿ ಹಾಗೂ 8 ವರ್ಷದ ಗಾನಶ್ರೀ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ಸರಕಾರ ರೂ.25 ಲಕ್ಷ ಪರಿಹಾರ ಧನವನ್ನು ನೀಡಬೇಕೆಂದು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತಕ್ಷಣ ಭೇಟಿಕೊಡಬೇಕು. ಕಂದಾಯ ಇಲಾಖೆಯ ಉನ್ನತ ಇಲಾಖಾಧಿಕಾರಿಗಳು ಮಹಜರು ನಡೆಸಿ ಸರಕಾರಕ್ಕೆ ಕೂಡಲೆ ವರದಿ ಒಪ್ಪಿಸಬೇಕೆಂದು ಕೆ.ಪಿ.ಸಿ.ಸಿ ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್‌ತೆಕ್ಕಿಲ್ ರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ

Sponsors

Related Articles

Back to top button