ಸುದ್ದಿ

ರಾಜ್ಯ ಮಟ್ಟದ ಫುಟ್ಬಾಲ್ ತಂಡಕ್ಕೆ ಅರಂತೋಡು ಎನ್.ಎಂ.ಪಿ.ಯು.ಸಿ ಯ ಅದ್ನಾನ್ ಪಟೇಲ್ ಆಯ್ಕೆ…

ಸುಳ್ಯ: ರಾಜ್ಯ ಪೂರ್ವ ವಿಶ್ವವಿದ್ಯಾಲಯ ಫುಟ್ಬಾಲ್ ತಂಡಕ್ಕೆ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಅದ್ನಾನ್ ಪಟೇಲ್ ಆಯ್ಕೆಯಾಗಿರುತ್ತಾರೆ.
ಸುಳ್ಯದಲ್ಲಿ ಇತ್ತೀಚಿಗೆ ನಡೆದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಕೂಟದಲ್ಲಿ ಭಾಗವಹಿಸಿದ ಅದ್ನಾನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ನಂತರ ಮಂಗಳೂರಿನ ಯೇನೆಪೋಯದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಇವರು ಅರಂತೋಡು ಅಬ್ದುಲ್ ಖಾದರ್ ಪಠೇಲ್ ಹಾಗೂ ದೈನಾಬಿ ಯವರ ಪುತ್ರ.

Related Articles

Back to top button