ಮಂಗಳೂರು – ಜಪ್ಪು ಪಟ್ನ ಪ್ರದೇಶ ಸೀಲ್ ಡೌನ್…

ಮಂಗಳೂರು: ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಜಪ್ಪಿನಮೊಗರುವಿನ ಜಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದಾರೆ. ಹಾಗೂ ಯೆಯ್ಯಾಡಿ ಪ್ರದೇಶ ಸೀಲ್ ಡೌನ್ ಆಗಿಲ್ಲ.
ರವಿವಾರದಂದು ಜಪ್ಪಿನ ಮೊಗರುವಿನ ಯುವಕ ಹಾಗೂ ಯೆಯ್ಯಾಡಿಯ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿತ್ತು. ಜಪ್ಪಿನ ಮೊಗರುವಿನ ವ್ಯಕ್ತಿ ಊರಿನಲ್ಲೇ ಇದ್ದರು. ಆದರೆ, ಯೆಯ್ಯಾಡಿಯ ಮಹಿಳೆ ಮುಂಬೈನಿಂದ ಬಂದಿದ್ದು, ನೇರವಾಗಿ ಕ್ವಾರಂಟೈನ್ ಗೆ ಒಳಗಾಗಿದ್ದರು.ಇದರಿಂದಾಗಿ ಈ ಮಹಿಳೆಗೆ ಯಾರದೇ ಸಂಪರ್ಕವಾಗಿಲ್ಲ. ಹಾಗಾಗಿ ಯೆಯ್ಯಾಡಿ ಪ್ರದೇಶ ಸೀಲ್ ಡೌನ್ ಮಾಡಿಲ್ಲ.
ಸೀಲ್ ಡೌನ್ ಆದ ಪ್ರದೇಶದ ಪೂರ್ವದಲ್ಲಿ ಕೆನಲ್, ಪಶ್ಚಿಮದಿಂದ ರೈಲ್ವೇ ಟ್ರ್ಯಾಕ್(ಉಳ್ಳಾಲದಿಂದ ಮಂಗಳೂರು ಜಂಕ್ಷನ್), ಉತ್ತರದಲ್ಲಿ ಕ್ಯಾಂಬ್ರಿಡ್ಜ್ ಶಾಲೆ, ದಕ್ಷಿಣದಲ್ಲಿ ಜೆಪ್ಪು ಪಟ್ನ ರೋಡ್ ಇದೆ. ಒಟ್ಟು 48 ಮನೆಗಳು, 3 ಅಂಗಡಿ ಮುಂಗಟ್ಟುಗಳು, ಶಾಲೆ ಕಟ್ಟಡಗಳಿವೆ ಹಾಗೂ ಈ ಪ್ರದೇಶದಲ್ಲಿರುವ ಒಟ್ಟು ಜನ ಸಂಖ್ಯೆ 205.

ಸೀಲ್ ಡೌನ್ ಸುತ್ತ ಇರುವ ಬಫರ್ ಝೋನ್ ನಲ್ಲಿ ಪೂರ್ವದಿಂದ ಬಜಾಲ್ ಫೈಸಲ್ ನಗರ್, ಪಶ್ಚಿಮದಿಂದ ಅರಬ್ಬಿ ಸಮುದ್ರ, ಉತ್ತರದಿಂದ ಬಿಕರ್ನಕಟ್ಟೆ, ದಕ್ಷಿಣದಲ್ಲಿ ಉಳ್ಳಾಲವಿದೆ. ಈ ಪ್ರದೇಶದಲ್ಲಿ 32,500 ಮನೆಗಳು,983 ಅಂಗಡಿ ಮುಂಗಟ್ಟುಗಳು/ ಕಚೇರಿಗಳಿವೆ ಹಾಗೂ ಈ ಪ್ರದೇಶದಲ್ಲಿರುವ ಜನ ಸಂಖ್ಯೆ 1,45,500.

Sponsors

Related Articles

Back to top button