ಸುದ್ದಿ

ಕಾಸರಗೋಡಿಗೆ ಏಮ್ಸ್ ಆಸ್ಪತ್ರೆ – ಸತ್ಯಾಗ್ರಹಕ್ಕೆ ಟಿ ಎಂ ಶಾಹೀದ್ ತೆಕ್ಕಿಲ್ ಬೆಂಬಲ…

ಕಾಸರಗೋಡು: ಕಾಸರಗೋಡಿಗೆ ಏಮ್ಸ್ ಆಸ್ಪತ್ರೆ ಆಗಬೇಕೆಂದು ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಕಾಸರಗೋಡಿನ ಬಸ್ ನಿಲ್ದಾಣದ ಸಮೀಪ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅನ್ನ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಮುಖಂಡರಾದ ಟಿ ಎಂ ಶಾಹೀದ್ ತೆಕ್ಕಿಲ್ ಭೇಟಿ ನೀಡಿ ಬೆಂಬಲ ಸೂಚಿಸಿದರು.
ಕಾಸರಗೋಡಿನಲ್ಲಿ ಏಮ್ಸ್ ಆಸ್ಪತ್ರೆಯ ಅಗತ್ಯ ಹಾಗೂ ಉಡುಪಿ, ದಕ್ಷಿಣ ಕನ್ನಡ, ಮಡಿಕೇರಿ, ಹಾಸನ, ಕಣ್ಣನ್ನೂರ್ ಜಿಲ್ಲೆಯನ್ನೊಳಗೊಂಡು ಕರ್ನಾಟಕ – ಕೇರಳ ರಾಜ್ಯದ ಜನತೆಗೆ ಎಂಡೋಸಲ್ಫಾನ್ ಸಹಿತ ಮಾರಕ ಖಾಯಿಲೆಗಳ ಚಿಕಿತ್ಸೆಗೆ ಏಮ್ಸ್ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೇರಳ ಮತ್ತು ಕೇಂದ್ರ ಸರಕಾರ ಕೂಡಲೇ ಏಮ್ಸ್ ನ ಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ವಿನಂತಿಸಿ, ಇನ್ನೂರು ಎಕ್ರೆ ಸ್ಥಳ ಹಾಗೂ ಮೂರುಸಾವಿರ ಕೋಟಿ ಹಣ ಮೀಸಲಿಡಲು ಆಗ್ರಹಿಸಿ ಅನ್ನ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು.
ಈ ಸಂಧರ್ಭದಲ್ಲಿ ಅನ್ನಸತ್ಯಾಗ್ರಹಕ್ಕೆ ನೇತೃತ್ವ ವಹಿಸುತ್ತಿರುವ ನಾಸರ್ ಚೆರ್ಕಲಂ, ಕುಂಟಾರು ರವೀಶ್ ತಂತ್ರಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದೀಕ್ ಕೋಕೋ , ಅಂಬಲತರ ಕುಂಞಕೃಷ್ಣನ್, ಮರಿನ ಕೊಟ್ಟಪ್ಪೂರಂ, ಶ್ರೀನಾಥ್ ಶಶಿ ,ರೆಡ್ ಇಸ್ ಬ್ಲಡ್ ಗ್ರೂಪ್ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button