ಅಜೆಕಾರು ಕಲಾಭಿಮಾನಿ ಬಳಗ – ಮಹಿಳೆಯರಿಗೆ ಯಕ್ಷಗಾನ ತರಬೇತಿ…
ಕಾರ್ಕಳ: ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ವತಿಯಿಂದ ಅಜೆಕಾರು ಘಟಕದ ಆಶ್ರಯದಲ್ಲಿ ಮಹಿಳೆಯರಿಗಾಗಿ ಉಚಿತ ಯಕ್ಷಗಾನ ತರಬೇತಿ ಅಜೆಕಾರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಮೇ 1 ರಂದು ಆದಿತ್ಯವಾರ ಆರಂಭಗೊಂಡಿತು.
ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ವತಿಯಿಂದ ಅಜೆಕಾರು ಘಟಕದ ಆಶ್ರಯದಲ್ಲಿ ಮಹಿಳೆಯರಿಗಾಗಿ ಉಚಿತ ಯಕ್ಷಗಾನ ತರಬೇತಿ ಅಜೆಕಾರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಮೇ 1 ರಂದು ಆದಿತ್ಯವಾರಹಿರಿಯ ಕಲಾ ಪೋಷಕ ಹಾಗೂ ಕೃಷಿಕ ಕುಟ್ಟಿ ಶೆಟ್ಟಿ ಎಣ್ಣೆಹೊಳೆ ದೀಪ ಬೆಳಗಿ ಶಿಬಿರವನ್ನು ಉದ್ಘಾಟಿಸಿದರು. ಅಜೆಕಾರು ಕಲಾಭಿಮಾನಿ ಬಳಗ ಪ್ರಾದೇಶಿಕ ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಕಳ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸವಿತಾ ಶೆಟ್ಟಿ, ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಯಶೋಧಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಸಂಚಾಲಕ, ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ಭಜನಾ ಸಂಘದ ಕಾರ್ಯದರ್ಶಿ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಯಶೋದಾ ಶೆಟ್ಟಿ ನಿರೂಪಿಸಿ, ಸರೋಜಾ ಶೆಟ್ಟಿ ವಂದಿಸಿದರು.
ತರಬೇತಿ ಶಿಬಿರ :
ಆರಂಭದ ದಿನ ಶಿಬಿರದಲ್ಲಿ 23 ಮಂದಿ ಆಸಕ್ತ ಬಾಲಕಿಯರು ಭಾಗವಹಿಸಿದ್ದರು. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಶಿಬಿರದ ನಿರ್ದೇಶಕರಾಗಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿಸಿದರು. ಪ್ರಥಮ ಹಂತದ ಶಿಬಿರವು ಮೇ 5 ರವರೆಗೆ ನಡೆಯಲಿದ್ದು ಆಸಕ್ತರು ಇನ್ನೂ ಭಾಗವಹಿಸಲು ಅವಕಾಶವಿದೆಯೆಂದು ವಿಜಯ ಶೆಟ್ಟಿ ತಿಳಿಸಿದ್ದಾರೆ.
ಮುಂದಿನ ಶಿಬಿರದಲ್ಲಿ ಪ್ರವೇಶ ಬಯಸುವವರು ಈ ಕೆಳಗಿನವರನ್ನು ಸಂಪರ್ಕಿಸಲು ಕೋರಲಾಗಿದೆ: ವಿಜಯ ಶೆಟ್ಟಿ (9845095526); ಬಾಲಕೃಷ್ಣ ಶೆಟ್ಟಿ (9821880089); ಯಶೋದ ಶೆಟ್ಟಿ (9449382787); ಸರೋಜ ಶೆಟ್ಟಿ (9741471524); ಅಶೋಕ ಶೆಟ್ಟಿ (8150819194).