ವಲ್ಲಭ ಭಾಯಿ ಪಟೇಲ್ ಏಕತಾ ಓಟ…..

ಪುತ್ತೂರು: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತ ಏಕತಾ ದಿನ ಆಚರಿಸಲಾಗುತ್ತಿದ್ದು, ಅದರ ಸಂಕೇತವಾಗಿ ಏಕತಾ ಓಟವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲದ ವತಿಯಿಂದಲೂ ಏಕತಾ ದಿವಸ್ ಕಾರ್ಯಕ್ರಮ ಆಯೋಜಿಸಲಾಯಿತು. ಭಾನುವಾರ ಬೆಳಗ್ಗೆ ಪುತ್ತೂರು ನಗರದ ದರ್ಬೆಯಿಂದ ಪುತ್ತೂರು ಬಿಜೆಪಿ ಕಚೇರಿ ತನಕ ಏಕತಾ ಓಟ ನಡೆಯಿತು. ದರ್ಬೆಯಿಂದ ಆರಂಭಗೊಂಡ ಏಕತಾ ಓಟ ಮುಖ್ಯರಸ್ತೆಯಾಗಿ ಪೊಲೀಸ್ ಸ್ಟೇಷನ್ ಬಳಿಯಿಂದ ಬಿಜೆಪಿ ಕಚೇರಿಯಲ್ಲಿ ಸಮಾಪನಗೊಂಡಿತು.
ಶಾಸಕ ಸಂಜೀವ ಮಠಂದೂರು ಏಕತಾ ಓಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಮತ್ತು ಏಕತಾ ಸಂದೇಶ ನೀಡುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಸ್ಮರಣೆಯ ಮೂಲಕ ಏಕತಾ ಓಟದಲ್ಲಿ ಯುವಜನತೆ ಪಾಲ್ಗೊಳ್ಳಬೇಕು ಎಂದರು. ದೇಶಕ್ಕಾಗಿ ಯಾರು ಹೋರಾಟ ಮಾಡಿದ್ದಾರೋ ಅಂತವರನ್ನು ಸ್ಮರಣೆ ಮಾಡುವುದು ಇವತ್ತಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪಟೇಲರು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅಖಂಡ ಭಾರತದ ಕಲ್ಪಣೆಯನ್ನು ಇಟ್ಟು ಕೊಂಡ ಸರ್ದಾರ್ ಪಟೇಲ್ ಅವರು ನಿಜಾಮರ ವಶದಲ್ಲಿದ್ದ ಹೈದರಬಾದ್, ಪೋರ್ಚುಗೀಶರ ವಶದಲ್ಲಿದ್ದ ಗೋವ, ಅದೇ ರೀತಿ ಕಾಶ್ಮೀರ ಹರಿದು ಹಂಚಿಹೋಗಿದ್ದ ಪ್ರಾಂತಗಳನ್ನು ಸ್ವಾತಂತ್ರ್ಯಾ ನಂತರ ಒಗ್ಗೂಡಿಸಿದ ಕೀರ್ತಿಗೆ ಪಾತ್ರರಾಗಿರುವ ಮೂಲಕ ಏಕತೆಯ ಸ್ವರೂಪ ಎಂಬ ದೃಷ್ಟಿಯಿಂದ ಅವರು ಕೈಗೊಂಡ ತೀರ್ಮಾನಗಳನ್ನು ಈ ದೇಶದ ಜನರು ಸ್ಮರಣೆ ಮಾಡಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಹಾರಾಡಿ, ಗೌರಿ ಬನ್ನೂರು, ಶಂಭು ಭಟ್, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ಹಲವಾರು ಮಂದಿ ಓಟದಲ್ಲಿ ಭಾಗವಹಿಸಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button