ಅನನ್ಯ ಎ.ಆರ್ ಬರಿಮಾರು – ಈಜುಸ್ಪರ್ಧೆಯಲ್ಲಿ ಬಹುಮಾನ…

ಬಂಟ್ವಾಳ: ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಡ್ಕ ಇಲ್ಲಿಯ 4ನೇ ತರಗತಿಯ ವಿದ್ಯಾರ್ಥಿನಿ ಅನನ್ಯ ಎ.ಆರ್ ಬರಿಮಾರು ಇವರು ಸೈಂಟ್ ಆಲೋಶಿಯಸ್ ಮಂಗಳೂರು ಇಲ್ಲಿ ಆ.14 ರಂದು ನಡೆದ ಈಜುಸ್ಪರ್ಧೆಯಲ್ಲಿ ವಿ-1 ಆಕ್ಯೂಕಾರ್ನಿವಲ್ -2022 ರ ರಾಜ್ಯ ಮಟ್ಟದ ಪ್ರಾಥಮಿಕ ವಿಭಾಗದ 9 ವರ್ಷ ವಯೋಮಾನದ ಬಾಲಕಿಯರ ಈಜುಸ್ಪರ್ಧೆಯ ಬ್ಯಾಕ್ ಸ್ಟ್ರೋಕ್ 50 ಮೀ. ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ, ತಾಲೂಕು ಪಂಚಾಯತ್ ಬಂಟ್ವಾಳ ಇಲ್ಲಿಯ ಅಶೋಕ್ ಕುಮಾರ್ ಬರಿಮಾರು ಮತ್ತು ಕೆ.ಪಿ.ಎಸ್. ಮೊಂಟೆಪದವು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕಿ ರೋಹಿಣಿ ಬಿ. ಇವರ ಪುತ್ರಿ.

Sponsors

Related Articles

Back to top button