ಸುದ್ದಿ

ಅರಂತೋಡು ಎಸ್ ಕೆ ಎಸ್ ಬಿವಿ ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ…

ಸುಳ್ಯ: ಸಮಸ್ತ ಕೇರಳ ಸುನ್ನಿ ಬಾಲ ವೇದಿ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸಹದ್ ಫೈಝಿ ಸಂಪಾದಕತ್ವದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ವನ್ನು ಜು.6ರಂದು ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ಬಿಡುಗಡೆಗೊಳಿಸಿದರು.
ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿದರು.ಜಮಾ ಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ಅಧ್ಯಕ್ಷತೆಯನ್ನು ವಹಿಸಿದ್ದರು .ಸದರ್ ಸಹದ್ ಫೈಝಿ ಸ್ವಾಗತಿಸಿ ವಿಶೇಷಾಂಕದ ಉದ್ದೇಶವನ್ನು ವಿವರಿಸಿದರು .ಕಾರ್ಯಕ್ರಮ ದಲ್ಲಿ ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಜಹರಿ,ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್ ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಕೆ.ಎಮ್ ಅಬೂಬಕ್ಕರ್ ಪಾರೆಕ್ಕಲ್ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ನಿರ್ದೇಶಕರಾದ ಎ.ಹನೀಫ್ ,ಮುಝಮ್ಮಿಲ್ ,ಸಮದ್ ಕೊಡೆಂಕೇರಿ, ಮುಜೀಬ್ ,ಹಾಜಿ ಅಜರುದ್ದೀನ್ ,ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಪಟೇಲ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಅಶೀಕ್ ಕುಕ್ಕುಂಬಳ ,ಅಬ್ದುಲ್ಲಾ ಗುಂಡಿ ,ಸಿದ್ದೀಖ್ ಎ ,ಹಮೀದ್ ಎ ಸುನ್ನಿ ಬಾಲ ವೇದಿಕೆ ಅಧ್ಯಕ್ಷ ಅಜರುದ್ದೀನ್ ಕಾರ್ಯದರ್ಶಿ ಅನ್ಸಾಫ್, ಕೊಶಾಧಿಕಾರಿ ಮುಝಮ್ಮಿಲ್, ಅಕ್ಮಲ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button