ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗಕ್ಕೆ ಕರ್ನಾಟಕ ಇನ್ನೋವೇಶನ್ ಅವಾರ್ಡ್ – 2022 …
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ ಎಂ ರವರಿಗೆ ಕರ್ನಾಟಕ ಸರ್ಕಾದರ ವತಿಯಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕೊಡುವ 2022 ರ, ಕರ್ನಾಟಕ ಇನ್ನೋವೇಶನ್ ಅವಾರ್ಡ್ – 2022 ಲಭಿಸಿರುತ್ತದೆ.
ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ಮಾ. 7 ರಂದು ನಡೆದ ರಾಷ್ಟ್ರೀಯ ವಿಜ್ಞಾನದ ದಿನದಂದು ಪದ್ಮಶ್ರೀ ಪ್ರೊ. ಎಂ.ಆರ್. ಎಸ್. ರಾವ್ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಪದ್ಮಶ್ರೀ ಪ್ರೊ. ಅಯ್ಯಪ್ಪನ್ ನೀಡಿ ಗೌರವಿಸಿದರು.
ಈ ಪ್ರಶಸ್ತಿಯು ಹತ್ತು ಸಾವಿರ ನಗದು ಒಳಗೊಡಿರುತ್ತದೆ. ಡಾ ಪ್ರವೀಣ್ ಅವರು ಅಭಿವೃದ್ಧಿ ಪಡಿಸಿರುವ ಹೈಡ್ರೋಜನ್ ಜನರೇಶನ್ ಮತ್ತು ತ್ಯಾಜ್ಯ ನೀರನ್ನು ಶುದ್ಧೀಕರಿಸುವ ತಂತ್ರಜ್ಞಾನಕ್ಕೆ ಈ ಪ್ರಶಸ್ತಿ ಲಭಿಸಿದೆ. ಡಾ. ಪ್ರವೀಣ್ ಅವರು ಈ ತಂತ್ರಜ್ಞಾನದಲ್ಲಿ ಕೆಲವು ನ್ಯಾನೊ ಪದಾರ್ಥಗಳನ್ನು ಕಂಡು ಹಿಡಿದು ಈ ಪದಾರ್ಥಗಳು ಹೆಚ್ಚು ಹೈಡ್ರೋಜನ್ ಕೊಡುತ್ತದೆ ಮತ್ತು ಮಾಲಿನ್ಯವಾದ ನೀರನ್ನು ಅತೀ ಕಡಿಮೆ ಅವಧಿಯಲ್ಲಿ ಶುದ್ಧೀಕರಿಸುತ್ತದೆ ಎಂದು ಅನ್ವೇಷಿಸಿದ್ದರು. ಇವರ ಈ ಸಂಶೋಧನೆಯ ಒಂದು ಭಾಗವು ಪ್ರತಿಷ್ಠಿತ ನೇಜರ್ ನಿಯತಾಕಾಲಿಕೆಯಲ್ಲಿ ಪ್ರಕಟವಾಗಿರುತ್ತದೆ.
ಈ ಸಾಧನೆಗೆ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ. ಎ. ರಾಘವೇಂದ್ರ ರಾವ್ ಮತ್ತು ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.