ಸರೋಜಿನಿ ಮಧುಸೂದನ ಕುಶೆ ಶಾಲೆಯಲ್ಲಿ ಸಾಹಿತ್ಯ ಅಭಿರುಚಿ ಕಾರ್‍ಯಕ್ರಮ…

ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ಹಾಗೂ ಸರೋಜಿನಿ ಮಧುಸೂದನ ಕುಶೆ ಶಾಲೆ ಇವರ ಜಂಟಿ ಆಶ್ರಯದಲ್ಲಿ 2024-25 ನೇ ಸಾಲಿನ ಸಾಹಿತ್ಯ ಅಭಿರುಚಿ ಕಾರ್‍ಯಕ್ರಮ ಜೂ.1 ರಂದು ನಡೆಯಿತು.

ಕಾರ್‍ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. 2024-25 ಸಾಲಿನ ಸಾಹಿತ್ಯ ಅಭಿರುಚಿ 101 ಕಾರ್‍ಯಕ್ರಮಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರೋ. ಶ್ರೀನಾಥ ಅವರು ಚಾಲನೆ ನೀಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಡಾ. ಮೀನಾಕ್ಷಿ ರಾಮಚಂದ್ರ, ಗೌರವ ಉಪನ್ಯಾಸಕರಾದ ವ. ಉಮೇಶ್ ಕಾರಂತ ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೊಪೆಸರ್, ಜೆಪ್ಪು ಬಂಟರ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ, ಅತ್ತಾವರ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ ಉಪಸ್ಥಿತರಿದ್ದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸರೋಜಿನಿ ಮಧುಸೂದನ ಕುಶೆ ಶಾಲೆ ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ವಹಿಸಿದರು. ಶಿಕ್ಷಕಿ ಸುರೇಖಾ ಯಾಳವಾರ, ಅಮೃತಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಡಾ. ಅರುಣಾ ನಾಗರಾಜ ಜೊತೆಗಿದ್ದರು.

Sponsors

Related Articles

Back to top button