ಆರೋಗ್ಯ ಇಲಾಖೆಯ ನೌಕರರ ಮುಷ್ಕರ – ಬೇಡಿಕೆ ಈಡೇರಿಕೆಗೆ ಬಂಟ್ವಾಳ ಶಾಸಕರಿಗೆ ಮನವಿ…

ಬಂಟ್ವಾಳ: ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಯನ್ನು ಈಡೇರಿಸುವಂತೆ ಸೆ. 24 ರಿಂದ ಮುಷ್ಕರ ನಡೆಯುತ್ತಿದ್ದು, ಆದರೆ ಸರಕಾರ ಇನ್ನೂ ನಮ್ಮ ಬೇಡಿಕೆಯ ಕುರಿತು ಗಮನ ಹರಿಸಿಲ್ಲ. ಹೀಗಾಗಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವಂತೆ ಬಂಟ್ವಾಳ ತಾಲೂಕಿನ ನೌಕರರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಮಾಡಿದರು.
ಒಳ ಮತ್ತು ಹೊರ ರೋಗಿಗಳ ತಪಾಸಣೆ, ಮಲೇರಿಯಾ ಮತ್ತು ಇತರೆ ರಾಷ್ಟೀಯ ಕಾರ್ಯಕ್ರಮಗಳ ಅನುಷ್ಠಾನ ಮಾಡುವಲ್ಲಿ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿಯವರೇ ಹೆಚ್ಚಿದ್ದಾರೆ. ಆದರೆ ಸರಕಾರ ನಮ್ಮ ಬೇಡಿಕೆ ಈಡೇರಿಕೆಯ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರತಿಭಟನೆಯಿಂದಾಗಿ ಕೋವಿಡ್ ತಪಾಸಣೆ, ಕಾಲ್ ಸೆಂಟರ್‌ಗಳು, ಕೋವಿಡ್ ವರದಿ, ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ, ಅಂಧತ್ವ ಕಾರ್ಯಕ್ರಮ ಮೊದಲಾದ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಬೇಡಿಕೆ ಈಡೇರಿಸಲು ಒತ್ತಡ ಹೇರುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ನೀಡುವ ವೇಳೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ| ಪ್ರಕಾಶ್‌ಕುಮಾರ್, ಕಾರ್ಯದರ್ಶಿ ವಿಶ್ವನಾಥ್ ಪಿ. ಹಾಗೂ ಇತರ ನೌಕರರು ಉಪಸ್ಥಿತರಿದ್ದರು

Sponsors

Related Articles

Leave a Reply

Your email address will not be published. Required fields are marked *

Back to top button