ಸುದ್ದಿ

ಪವರ್ ಟಿ.ವಿ. ಪ್ರಸಾರ ಸ್ಥಗಿತ ಆದೇಶ ವಿರುದ್ಧ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ…

ಮಂಗಳೂರು: ಪವರ್ ಟಿವಿ ನೇರಪ್ರಸಾರ ಸ್ಥಗಿತಗೊಳಿಸಿದ ಸರಕಾರದ ಕ್ರಮದ ವಿರುದ್ಧ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪವರ್ ಟಿವಿ ಸ್ಥಗಿತಕ್ಕೆ ಕಾರಣವಾದ ನಿಲುವಿನಿಂದ ಸರಕಾರ ತಕ್ಷಣವೇ ಹಿಂದೆ ಸರಿದು, ವಾಹಿನಿಯ ಪ್ರಸಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಿಎಂ ಅವರಿಗೆ ಒತ್ತಾಯಿಸಲಾಯಿತು. ಅಲ್ಲದೆ, ಈ ರೀತಿಯ ಕ್ರಮ ಪ್ರಜಾಪ್ರಭುತ್ವ ಮೌಲ್ಯಕ್ಕೆ ಅಪಚಾರ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಖಂಡಿಸಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಗೌರವಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸುಳ್ಯ ಘಟಕ ಪ್ರಧಾನ ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ಸಂಘಟನೆ ಕಾರ್ಯದರ್ಶಿಗಳಾದ ವೈಲೆಟ್ ಪಿರೇರಾ ಮತ್ತು ಕೆನ್ವಿಟ್ ಜೆ. ಪಿಂಟೋ ಮತ್ತು ಸದಸ್ಯರಾದ ಕುಶಾಂತ್, ಪವರ್ ಟಿವಿ ಮಂಗಳೂರು ವರದಿಗಾರ ಇರ್ಷಾದ್ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button