ಸುಳ್ಯ ಡಿವಿಷನ್ ಎಸ್ ಎಸ್ ಎಫ್ ನಿಂದ ತಹಶೀಲ್ದಾರರಿಗೆ ಮನವಿ…

ಸುಳ್ಯ : ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಸಮಿತಿಯ ನಿಯೋಗವು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸುಳ್ಯ ತಾಲೂಕು ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಲಿಖಿತ ಮನವಿ ನೀಡಿತು.
ಎಸ್ ಎಸ್ ಎಫ್ ನ ತುರ್ತು ಸೇವಾ ತಂಡವು ಎಸ್ ವೈ ಎಸ್ ಸಹಕಾರದೊಂದಿಗೆ ನಡೆಸುತ್ತಿರುವ ಸಾಮಾಜಿಕ ಸೇವೆಯ ವರದಿಯನ್ನು ತಹಶೀಲ್ದಾರರಿಗೆ ನೀಡಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ, ಜನರಿಗೆ ಅತೀ ಅಗತ್ಯವಾಗಿರುವ ಬೇಡಿಕೆಗಳನ್ನು ಮುಂದಿಟ್ಟು ನೆರವೇರಿಸುವಂತೆ ಮನವಿಯನ್ನು ಮಾಡಲಾಯಿತು.
ನಿಯೋಗದಲ್ಲಿ ನಾಯಕರಾದ ಸಿದ್ದೀಖ್ ಗೂನಡ್ಕ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಹಸೈನಾರ್ ಗುತ್ತಿಗಾರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button