ಕೆಪಿಸಿಸಿಯ ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಸುಳ್ಯದಿಂದ ಟಿ.ಎಂ.ಶಹೀದ್ ಹಾಗೂ ಧನಂಜಯ ಅಡ್ಪಂಗಾಯ ನೇಮಕ…
ಬೆಂಗಳೂರು: ಕೆಪಿಸಿಸಿಯಿಂದ ವಿಶೇಷ ಸದಸ್ಯತ್ವ ನೋಂದಣಿ (Digital online) ಅಭಿಯಾನಕ್ಕೆ ಸುಳ್ಯದಿಂದ ಕೊಡಗು ಜಿಲ್ಲೆಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹಾಗೂ ಹಾಸನ ಜಿಲ್ಲೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧನಂಜಯ ಅಡ್ಪಂಗಾಯ ಇವರುಗಳನ್ನು ನೋಂದಣಿ ಸದಸ್ಯತ್ವ ಉಸ್ತುವಾರಿ ನಾಯಕರನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕಗೊಳಿಸಿರುತ್ತಾರೆ.
ಇವರು ನಿಯೋಜಿತ ಜಿಲ್ಲೆಗಳ ವಿಧಾನಸಭಾವಾರು ಸದಸ್ಯತ್ವ ನೋಂದಣಿ ಕೋ-ಆಡಿನೇಟರ್ ಗಳಾಗಿ ಕೆಪಿಸಿಸಿಯಿಂದ ನಿಯೋಜನೆಗೊಂಡ ಇತರ ಉಸ್ತುವಾರಿ ನಾಯಕರುಗಳೊಂದಿಗೆ ನೋಂದಣಿ ಪ್ರಕ್ರಿಯೆ ಮುಗಿಯುವವರೆಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇದ್ದು ಜವಬ್ದಾರಿಯನ್ನು ವಹಿಸಿ, ನೋಂದಣಿ ಪ್ರಕ್ರಿಯೆಯು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ.
ದ.ಕ. ಜಿಲ್ಲೆಯಿಂದ ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಅಭಯ್ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತ ಗಟ್ಟಿ, ಕೃಪಾ ಆಳ್ವ ನೇಮಕಗೊಂಡ ಇತರ ನೋಂದಣಿ ಉಸ್ತುವಾರಿ ನಾಯಕರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಬಿ ಎಲ್ ಶಂಕರ್, ಮಧು ಬಂಗಾರಪ್ಪ ,ಕೃಪಾ ಆಳ್ವ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಕೃಷ್ಣಪ್ಪ ಇವರು ನೋಂದಣಿ ಉಸ್ತುವಾರಿಯಾಗಿರುತ್ತಾರೆ.
ಧನಂಜಯ ಅಡ್ಪಂಗಾಯ