ಸುದ್ದಿ

ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ – ಮದ್ರಸ ಅಧ್ಯಾಪಕನ ಬಂಧನ…

ಸುಳ್ಯ : ತನ್ನ ಅಪ್ರಾಪ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ಮೂಲದ ಮದ್ರಸ ಅಧ್ಯಾಪಕನೋರ್ವನನ್ನು ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಪ್ರಸ್ತುತ ಕಾಞಂಗಾಡ್ ಸಮೀಪದ ತೈಕಡಪ್ಪುರ ನಿವಾಸಿಯಾದ ಈ ಉಸ್ತಾದ್ ಅಲ್ಲಿ ಮದ್ರಸ ಶಿಕ್ಷಕನಾಗಿದ್ದ. ಗೂನಡ್ಕ ಮೂಲದವನಾದ ಈತ ಇಲ್ಲಿಯೂ ಒಂದು ವಿವಾಹವಾಗಿದ್ದು 4 ಮಕ್ಕಳಿದ್ದಾರೆ, ಕಾಞಂಗಾಡ್ ನಲ್ಲಿ ಮತ್ತೊಂದು ವಿವಾಹವಾಗಿದ್ದ.

ಈತನ ಹದಿನಾರು ವರ್ಷದ ಮಗಳು ತನ್ನ ಮಾವನ ಸಹಕಾರದೊಂದಿಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಕಳೆದ ಕೆಲವು ವರ್ಷಗಳಿಂದ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಹಾಗೂ ಇತರ ಕೆಲವು ಮಂದಿಯೂ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾದ ಕುರಿತು ಮಾಹಿತಿ ನೀಡಿದ್ದಾಳೆ. ಈ ಹುಡುಗಿ ಗರ್ಭಿಣಿಯಾದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿತ್ತು.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಉಸ್ತಾದ್ ಹಾಗೂ ಪರಿಸರದ ಮೂವರು ಯುವಕರನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಮಾಹಿತಿ ಗೊತ್ತಿದ್ದೂ ತಿಳಿಸದ ಹಿನ್ನೆಲೆಯಲ್ಲಿ ಹುಡುಗಿಯ ತಾಯಿಯ ಮೇಲೂ ಕೇಸು ದಾಖಲಾಗಿದೆ.
ಈ ಉಸ್ತಾದ್ ವಿರುದ್ಧ ಈ ಹಿಂದೆಯೂ ಪೋಕ್ಸೋ ಪ್ರಕರಣ ಸಹಿತ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.

Related Articles

Leave a Reply

Your email address will not be published.

Back to top button