ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಸಂಘದ ಉದ್ಘಾಟನೆ,ತಾಂತ್ರಿಕ ಉಪನ್ಯಾಸ…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ ಸೈಬರ್ ನೌಟ್ಸ್ ಇದರ ಉದ್ಘಾಟನೆ ಮತ್ತು ತಾಂತ್ರಿಕ ಉಪನ್ಯಾಸ ನ. 2 ರಂದು ನಡೆಯಿತು.
ಮಂಗಳೂರಿನ ಇಂಫೆಲ್ಸಿಸ್ ಕಂಪೆನಿಯ ಡೆಲಿವರಿ ಮುಖ್ಯಸ್ಥ ಸತ್ಯನಾರಾಯಣ ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ವಿಭಾಗ ಮುಖ್ಯಸ್ಥ ಡಾ. ವೆಂಕಟೇಶ್ ಶಂಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರತೀಕ್ಷಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಫೀಝ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರೊ. ಮಹೇಶ್ ಬಿ. ಎಲ್. ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು . ಮೌಲ್ಯ ಅತಿಥಿ ಪರಿಚಯ ಮಾಡಿದರು. ಹರ್ಷಿತ್ ಕೆ ಎನ್. ವಂದಿಸಿದರು. ರಿಫಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಂಗಳೂರಿನ ಇಂಫೆಲ್ಸಿಸ್ ಕಂಪೆನಿಯ ಟೆಕ್ ಲೀಡ್ ಪ್ರಮೋದ್ ‘ಪ್ರೊಗ್ರೆಸಿವ್ ವೆಬ್ ಆಪ್ಸ್’ ವಿಷಯದಲ್ಲಿ ತಾಂತ್ರಿಕ ಉಪನ್ಯಾಸ ನೀಡಿದರು.

Sponsors

Related Articles

Back to top button