ಸಂಪಾಜೆ, ಅರಂತೋಡು ಗ್ರಾಮ- ಬೂತ್ ಮಟ್ಟದ ಮತದಾರ ಸಂಪರ್ಕ ಅಭಿಯಾನ…

205 ಮನೆಗೆ ಭೇಟಿ ನೀಡಿದ ಕೆಪಿಸಿಸಿ ಮುಖ್ಯ ವಕ್ತಾರ ಹಾಗೂ ಬೆಳ್ತಂಗಡಿ ಕೆಪಿಸಿಸಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್…

ಸುಳ್ಯ: ಅರಂತೋಡು ಗ್ರಾಮದ ಬೂತ್ ನಂಬ್ರ 216 ರಲ್ಲಿ ತಮ್ಮ ಮತ ಇರುವ ಸಂಪಾಜೆ ಗ್ರಾಮದ ಬೂತ್ ನಂಬ್ರ 222 ರಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಹಾಗೂ ಮನವಿ ಪತ್ರ ಮನೆ ಮನೆ ತಲುಪಿಸುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಮುಖ್ಯ ವಕ್ತಾರ ಹಾಗೂ ಕೆಪಿಸಿಸಿ ಬೆಳ್ತಂಗಡಿ ವಿಧಾನಸಭಾ ಕೆಪಿಸಿಸಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಜು ಅರಂತೋಡು, ಝುಬೈರ್ ಎಸ್ ಇ, ಶಂಸುದ್ದಿನ್ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೆ ೫೫
ಮನೆಗಳಿಗೆ ಭೇಟಿ ನೀಡಲಾಯಿತು.
ಸಂಪಾಜೆ ಗ್ರಾಮದಲ್ಲಿ ಅಬುಶಾಲಿ ಗೂನಡ್ಕ, ಸವಾದ್ ಗೂನಡ್ಕ, ಉಬೈಸ್ ಗೂನಡ್ಕ, ಸಫ್ವಾನ್, ಜೊತೆಯಲಿದ್ದರು ಸರಕಾರ ಬರುವುದು ಗ್ಯಾರಂಟಿ ಮುಂದಿನ ದಿನಗಳಲ್ಲಿ ಉಚಿತ ಕರೆಂಟ್ ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಗ್ಗೆ ಮತದಾರರಿಗೆ ವಿವರಿಸಿದರು. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಸಹಿ ಇರುವ ಗ್ಯಾರಂಟಿ ಕಾರ್ಡ್ ಮತ್ತು ಸುಳ್ಯದ ಅಭ್ಯರ್ಥಿ ಕೃಷ್ಣಪ್ಪ ರಾಮಕುಂಜ ಅವರ ಮನವಿ ಪತ್ರ ವಿತರಿಸಿದರು. ಸುಳ್ಯದಲ್ಲಿ ಶಾಸಕರಾಗಿ ಜಿ ಕೃಷ್ಣಪ್ಪ ರಾಮಕುಂಜ ಆಯ್ಕೆ ಆಗುತ್ತಾರೆ ಸಂಪಾಜೆ ಗ್ರಾಮದಲ್ಲಿ ಮಾಡಿದಂತೆ ಅರಂತೋಡಿನ ಅಭಿವೃದ್ಧಿಗೆ ಹತ್ತು ಕೋಟಿಯ ಗ್ರಾಮೀಣ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಅಭಿವೃದ್ಧಿ ಕೆಲಸ ಪಕ್ಷದ ನಾಯಕರ ಸಹಕಾರದೊಂದಿಗೆ ಮಾಡಿಸುತ್ತೇನೆ ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಭರವಸೆ ನೀಡಿದರು.
ಟಿ ಎಂ ಶಾಹಿದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ಸುಳ್ಯ ವಿಧಾನಸಭಾ ನಗರ, ಇತರ ಸ್ಥಳ, ಅಲ್ಲದೆ ಸಂಪಾಜೆ ಹಾಗೂ ಅರಂತೋಡು ಗ್ರಾಮದಲ್ಲಿ ಮಾತ್ರ ಒಟ್ಟು 205 ಮನೆ ಮನೆಗೆ ಭೇಟಿ ನೀಡಲಾಗಿದೆ.

whatsapp image 2023 04 30 at 12.32.09 pm
whatsapp image 2023 04 30 at 12.30.36 pm
whatsapp image 2023 04 30 at 12.30.27 pm
whatsapp image 2023 04 30 at 12.32.20 pm
whatsapp image 2023 04 30 at 12.32.43 pm
Sponsors

Related Articles

Back to top button