ಜ. 10 ರಂದು ಈ ವರ್ಷದ ಮೊದಲ ಚಂದ್ರಗ್ರಹಣ…

ಮಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಜ. 10ರಂದು ರಾತ್ರಿ 10.37ರಿಂದ 11ರ ಮುಂಜಾನೆ 2.42ರ ವೇಳೆಗೆ ಸಂಭವಿಸಲಿದೆ.
ಚಂದ್ರ ಗ್ರಹಣದಲ್ಲಿ ಭೂಮಿಯ ದಟ್ಟನೆರಳು ಚಂದ್ರನ ಮೇಲೆ ಬಿದ್ದು ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣ ನಮಗೆ ಗೋಚರವಾಗುತ್ತದೆ. ಆಗ ಚಂದ್ರನ ಬಿಂಬವು ತಾಮ್ರವರ್ಣ ಅಥವಾ ರಕ್ತವರ್ಣದಲ್ಲಿ ಕಂಗೊಳಿಸು ತ್ತದೆ. ಆದರೆ ಈ ಬಾರಿ ಸಂಭವಿಸುವ ಚಂದ್ರಗ್ರಹಣದಲ್ಲಿ ಭೂಮಿಯ ದಟ್ಟನೆರಳು ಚಂದ್ರನ ಮೇಲೆ ಬೀಳದೆ ಅರೆನೆರಳು ಚಂದ್ರನ ಮೇಲೆ ಬೀಳುವ ಕಾರಣ ಚಂದ್ರ ನಸುಗೆಂಪು ಅಥವಾ ತಾಮ್ರ ವರ್ಣಕ್ಕೆ ಬದಲಾಗಿ ಬೂದು ಬಣ್ಣದಲ್ಲಿ ಗೋಚರಿಸುತ್ತಾನೆ. 2018ರ ಜನವರಿ ಮತ್ತು 2019ರ ಜುಲೈಯಲ್ಲಿ ಘಟಿಸಿದ ಚಂದ್ರಗ್ರಹಣದ ವೇಳೆ ಚಂದ್ರನು ರಕ್ತವರ್ಣದಲ್ಲಿ ಗೋಚರವಾಗಿದ್ದ.

Sponsors

Related Articles

Leave a Reply

Your email address will not be published. Required fields are marked *

Back to top button