ಸುಳ್ಯದ ವಿದ್ಯಾಸಂಸ್ಥೆ ಗಳು ಸಾಮರಸ್ಯದಿಂದ ಜಿಲ್ಲೆಗೆ ಮಾದರಿ : ದೇವರ ಕೊವಿಲ್…

ಸಮಸ್ತ ಮುಶಾವರ ಸದಸ್ಯರಿಗೂ ಮತ್ತು ಸಚಿವರಿಗೆ ಹರ್ಲಡ್ಕ ವಿಲ್ಲಾ ದಲ್ಲಿ ಸನ್ಮಾನ…

ಸುಳ್ಯ: ಸರ್ವಧರ್ಮ ಸೌಹಾರ್ದತೆ ಸುಳ್ಯದ ಅಭಿವೃದ್ಧಿಗೆ ಪೂರಕ ಸುಳ್ಯದ ವಿದ್ಯಾ ಸಂಸ್ಥೆ ಗಳಲ್ಲಿ ಕೇರಳ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಸೌಹಾರ್ದತೆಯ ವಾತಾವರಣ ಜಿಲ್ಲೆಗೆ ಮಾದರಿ ಎಂದು ಸನ್ಮಾನ ಸ್ವೀಕರಿಸಿದ ಕೇರಳ ರಾಜ್ಯ ಸರಕಾರದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಅಹ್ಮದ್ ದೇವರ ಕೊವಿಲ್ ಹೇಳಿದರು.
ಸುಳ್ಯಕ್ಕೆ ಭೇಟಿ ನೀಡಿದ ಸಚಿವರನ್ನು ಹಾಗೂ ಕೇರಳ ಸಮಸ್ತ ಮುಶಾವರ ಸದಸ್ಯರಾದ ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ರನ್ನು ಹರ್ಲಡ್ಕ ವಿಲ್ಲಾದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ. ಎಂ. ಶಹೀದ್,ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ, ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಕೇಂದ್ರದ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್, ಪ್ರದಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ಉಪಾಧ್ಯಕ್ಷ ಎಸ್. ಪಿ.ಅಬೂಬಕ್ಕರ್,ಅಬ್ದುಲ್‌ ಖಾದರ್ ಹಾಜಿ ಪಟೇಲ್, ನಿರ್ದೇಶಕರು ಗಳಾದ ಸಿದ್ದೀಕ್ ಕಟ್ಟೆಕ್ಕಾರ್, ಶಾಫಿ ಕುತ್ತಮೊಟ್ಟೆ,ಸಿದ್ದೀಕ್ ಕೊಕ್ಕೋ, ಸಲಹಾ ಸಮಿತಿ ಸದಸ್ಯರಾದ ಬಾಬಾಹಾಜಿ ಎಲಿಮಲೆ, ಉದ್ಯಮಿ ಯೂಸುಫ್ ಜಿರ್ಮುಕಿ,ಹಮೀದ್ ಕೊಡಿಂಬಾಳ,ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವರಾದ ಅನ್ಸಾರಿಯ ಅನಾಥ ನಿರ್ಗತಿಕ ಮಕ್ಕಳ ಕೇಂದ್ರ ಕ್ಕೆ ಭೇಟಿ ನೀಡಿದರು.
ಅನ್ಸಾರಿಯ ಕಾರ್ಯದರ್ಶಿ ಶರೀಫ್ ಸುದ್ದಿ, ಅನ್ಸಾರಿಯ ವ್ಯವಸ್ಥಾಪಕ ಉವೈಸ್ ಬಿಟಿಗೆ ಕಾರ್ಯಕ್ರಮ ನಿರೂಪಿಸಿದರು.

whatsapp image 2023 07 24 at 10.24.48 pm
Sponsors

Related Articles

Back to top button