ಸುದ್ದಿ

ಆ.14 – ಸ್ವಾತಂತ್ರ್ಯಾಮೃತ ಯಕ್ಷ ಸಂಭ್ರಮ…

ಬಂಟ್ವಾಳ: ಯಕ್ಷಮಿತ್ರರು ವಿಟ್ಲ ವಾಟ್ಯಾಪ್ ಬಳಗ ಸಹಕಾರದೊಂದಿಗೆ ಆ.14ರಂದು ಸ್ವಾತಂತ್ರ್ಯಾಮೃತ ಯಕ್ಷ ಸಂಭ್ರಮ ಕಾರ್ಯಕ್ರಮವು ಹಗಲು ರಾತ್ರಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದ ಬಲಿಪ ಪ್ರಸಾದ ಭಟ್ ವೇದಿಕೆಯಲ್ಲಿ ನಡೆಯಲಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ತಿಳಿಸಿದರು.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ ಬೆಳಿಗ್ಗೆ 9.30 ರಿಂದ ತೆಂಕು – ಬಡಗು ಯಕ್ಷಗಾನ ವೈಭವ , 1.30 ರಿಂದ ತಾಳಮದ್ದಳೆ ಇಂದ್ರತಂತ್ರ-ಪ್ರಹ್ಲಾದ ಶಾಪ, 6.30 ರಿಂದ ತೆಂಕು -ಬಡಗು ಯಕ್ಷಗಾನ ಕೃಷ್ಣಾರ್ಜುನ , ರಾತ್ರಿ 10.30 ರಿಂದ ಯಕ್ಷಗಾನ ಬ್ರಹ್ಮಸಾರಥ್ಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆಯಲಿದ ಎಂದರು.
ಈ ಸಂದರ್ಭದಲ್ಲಿ ಕಲಾವಿದರಾದ ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ , ಬಾಲಕೃಷ್ಣ ಮಣಿಯಾಣಿ ಮವ್ವಾರು, ಮೋನಪ್ಪ ಗೌಡ ಕಿನ್ನಿಕೊಡಂಗೆ, ರತ್ನ ಕೆ. ಭಟ್ ತಲಂಜೇರಿ, ಸಂಜೀವ ದೇವಾಡಿಗ ಹಚ್ಚಾಡಿ, ಪಿ.ಎನ್. ಕೃಷ್ಣ ಭಟ್ ಪಿಲಿಂಗೂರು ಇವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುಬ್ರಮಣ್ಯ ಮುರಾರಿ ಭಟ್ ಪಂಜಿಗದ್ದೆ, ರಾಜಾರಾಮ ಭಟ್ ಕೋಡಪದವು,ಸುಭಾಶ್ಚಂದ್ರ ಜೈನ್ ಉಪಸ್ಥಿತರಿದ್ದರು.

 

Related Articles

Back to top button