ಸುಳ್ಯದಲ್ಲಿ ಮಲೆನಾಡು ಸಿರಿ ಶಿಕ್ಷಕ ಪ್ರಶಸ್ತಿ, ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ…
ಸುಳ್ಯ:ಸಜ್ಜನ ಸಿರಿ ಪ್ರಶಸ್ತಿ, ಮಲೆನಾಡ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಸೆ.18 ರಂದು ಸಂಧ್ಯಾ ರಶ್ಮಿ ಸಭಾಭವನದಲ್ಲಿ ನಡೆಯಿತು.
ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಪ್ರತಿ ವರ್ಷ ಶಿಕ್ಷಕರಿಗೆ ಹಾಗೂ ಶಿಕ್ಷಣ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಕೊಡುವ ಪ್ರಶಸ್ತಿಗಳಾದ ಸಜ್ಜನ ಸಿರಿ ಪ್ರಶಸ್ತಿಯನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಪಿ. ಮಹದೇವ್ ಅವರಿಗೆ ನೀಡಿ ಗೌರವಿಸಲಾಯಿತು.
ಹಾಗೂ ಮಲೆನಾಡು ಸಿರಿ ಶಿಕ್ಷಕಿ ಪ್ರಶಸ್ತಿಗೆ ಮರ್ಕಂಜ ಮಿತ್ತಡ್ಕ ಪ್ರಾಥಮಿಕ ಶಾಲೆಯ ಶಿಕ್ಷಕಿ ತೀರ್ಥಕುಮಾರಿ ಹಾಗೂ ಗುತ್ತಿಗಾರು ಪ್ರೌಢ ಶಾಲೆ ಶಿಕ್ಷಕ ಗಿರೀಶ್ ಕುಮಾರ್ ಹಾಗೂ ವಿಕಲಚೇತನ ಮಕ್ಕಳಿಗೆ ಶಿಕ್ಷಣ ನಿಡುವ ಶಿಕ್ಷಕಿ ಕೃತಿಕರವರಿಗೆ ಮಲೆನಾಡು ಶಿಕ್ಷಣ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿಕಲಚೇತನ ವಿದ್ಯಾರ್ಥಿ ಸಿಂಚನ್ ಎಸ್. ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎನ್. ಎ. ಜ್ಞಾನೇಶ್ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ, ಸುಳ್ಯ ಪೋಲಿಸ್ ಉಪನಿರೀಕ್ಷಕ ಹರೀಶ್ ಎಂ. ಆರ್. ಸನ್ಮಾನಿತರರಿಗೆ ಗೌರವಿಸಿದರು.
ಮಲೆನಾಡು ಚಾರಿಟೇಬಲ್ ಟ್ರಸ್ಟ್ ಗೌರವಧ್ಯಕ್ಷ ಕೆ.ಎಂ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಮಲ್ನಾಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕ.ರಾ.ಸ.ನೌ.ಸಂಘ ಅಧ್ಯಕ್ಷ ತಿರ್ಥರಾಮ, ಸುಳ್ಯ ಸಿ.ಡಿ.ಪಿ.ಓ ರಶ್ಮಿಅಶೋಕ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಸಜ್ಜನ ಪ್ರತಿಷ್ಠಾನ ನಿರ್ದೇಶಕ ರಹೀಂ ಬಿಜದಕಟ್ಟೆ , ಸುಳ್ಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ್ ಬಳ್ಳಾರಿ, ಇಂಡಿಯನ್ ಟೈಲ್ ವರ್ಲ್ಡ್ ಪಾಲುದಾರ ಸಂಶುದ್ದೀನ್ ಕೆ.ಬಿ, ರೋಟರಾಕ್ಟ್ ಕ್ಲಬ್ ಅಧ್ಯಕ್ಷ ಶಹೀದ್ ಪಾರೆ, ಯುವ ಉದ್ಯಮಿ ಸಿದ್ದೀಕ್ ಕೊಕ್ಕೊ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ವಿಕಲಚೇತನ ಮಕ್ಕಳ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು, ಟ್ರಸ್ಟ್ ನಿರ್ದೇಶಕ ರಫೀಕ್ ಚೆಂಗಳ ವಂದಿಸಿದರು.