ಸುದ್ದಿ

ಪತಂಜಲಿಯ ಕೊರೋನಿಲ್ ಮಾರಾಟಕ್ಕೆ ಆಯುಷ್‌ ಇಲಾಖೆ ಅನುಮತಿ…

ನವದೆಹಲಿ: ಪತಂಜಲಿ ಸಂಸ್ಥೆಯ ಕೊರೋನಿಲ್ ನ್ನು ರೋಗನಿರೋಧಕ ಉತ್ತೇಜಕವನ್ನಾಗಿ ಮಾತ್ರ ಮಾರಾಟ ಮಾಡಲು ಕೇಂದ್ರ ಆಯುಷ್ ಸಚಿವಾಲಯ ಅನುಮತಿ ನೀಡಿದೆ.
ಕೊರೊನಾ ಗುಣಪಡಿಸುವ ಔಷಧ ಎಂದು ಹೇಳಿಕೊಂಡೇ ವಾರದ ಹಿಂದೆ ಕೊರೊನಿಲ್‌ ಅನ್ನು ಬಿಡುಗಡೆ ಮಾಡಿದ್ದ ಪತಂಜಲಿ ಸಂಸ್ಥೆ, ಮಂಗಳವಾರ, ತಾನು ಕೊರೊನಾ ಗುಣಪಡಿಸುವ ಔಷಧ ತಯಾರಿಸೇ ಇಲ್ಲ. ಹಾಗೆಂದು ಎಲ್ಲೂ ಪ್ರಚಾರ ಕೂಡ ಮಾಡಿಲ್ಲ ಎಂದು ಹೇಳಿತ್ತು.ಆಯುಷ್ ಸಚಿವಾಲಯ ಕೊರೋನಿಲ್ ನ್ನು ಕೋವಿಡ್-19 ಗುಣಪಡಿಸುವುದಕ್ಕಾಗಿ ಇರುವ ಆಯುವರ್ವೇದ ಔಷಧ ಎಂದು ತಾನು ಪ್ರಮಾಣೀಕರಿಸುವವರೆಗೂ ಅದನ್ನು ಮಾರಾಟ ಮಾಡಬಾರದೆಂದು ಹೇಳಿತ್ತು.ಇದೀಗ ಕೇಂದ್ರ ಆಯುಷ್ ಸಚಿವಾಲಯ ಕೊರೋನಿಲ್‌ನ್ನು ರೋಗನಿರೋಧಕ ಉತ್ತೇಜಕವನ್ನಾಗಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದೆ.

Related Articles

Leave a Reply

Your email address will not be published.

Back to top button