ಸುದ್ದಿ

ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಫಿಟ್ ಇಂಡಿಯಾ ಸಪ್ತಾಹ ಮತ್ತು ರೆಡ್ ಕ್ರಾಸ್ ಘಟಕದ ಉದ್ಘಾಟನೆ…

ಬಂಟ್ವಾಳ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಫಿಟ್ ಇಂಡಿಯಾ ಸಪ್ತಾಹ ಹಾಗೂ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಡಿ.2 ರಂದು ನಡೆಯಿತು.
ರೆಡ್ ಕ್ರಾಸ್ ಘಟಕವನ್ನು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭ. ಹಿರಣ್ಮಯಿ ಫಲಕದ ಪರದೆ ಸರಿಸುವ ಮೂಲಕ ಉದ್ಘಾಟಿಸಿದರು. ಶ್ರೀರಾಮ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಹಾಗೂ ಹಿಂದು ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾಗಿರುವ ರಾಧಾಕೃಷ್ಣ ಅಡ್ಯಂತಾಯ ಇವರು ಸ್ವಾತಂತ್ರ್ಯ ಹೋರಾಟಗಾರ ಮಹಾಪುರುಷರ ಬಗ್ಗೆ ಮಾತನಾಡಿದರು. ಕಾರ್‍ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶಾಂಭಾವಿ ಮಾತಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವಾಸವಿ ಕೆ.ಸಿ ಸ್ವಾಗತಿಸಿ, ದೀವಿತ್ ವಂದಿಸಿ, ಶ್ರೀನಿವಾಸ ನಿರೂಪಿಸಿದರು.

Related Articles

Back to top button