ಸುದ್ದಿ

ಬಂಟ್ವಾಳ – ಪೋಲೀಸರ ಮೇಲೆ ಹಲ್ಲೆ …

ಬಂಟ್ವಾಳ: ಪೋಲೀಸರ ಮೇಲೆ ಹಲ್ಲೆ ನಡೆಸಿ ಬಳಿಕ ಕೊಲೆ ಬೆದರಿಕೆ ಹಾಕಿದ ಘಟನೆ ಗುರುವಾರ ರಾತ್ರಿ ಮೆಲ್ಕಾರ್ ಎಂಬಲ್ಲಿ ನಡೆದಿದೆ.
ಗೋಳ್ತಮಜಲು ನಿವಾಸಿ ಲಾರಿ ಚಾಲಕ ಅಬ್ದುಲ್ ಸಲಾಂ ಎಂಬಾತ ಆರೋಪಿಯಾಗಿದ್ದು ಈತ ಪೋಲೀಸರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ , ಪೋಲೀಸ್ ವಾಹನವನ್ನು ರಾಡ್ ನಿಂದ ಹೊಡೆದು ಪುಡಿ ಮಾಡಿದ್ದಲ್ಲದೆ ಪೋಲೀಸರಿಗೆ ಕೊಲೆ ಬೆದರಿಕೆ ಯನ್ನು ಹಾಕಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಎ.ಎಸ್.ಐ. ಶೈಲೇಶ್ ಹಾಗೂ ಸಿಬ್ಬಂದಿಗಳಾದ ದೇವಪ್ಪ , ಮಲ್ಲಕ್ ಸಾಬ್, ಹಾಗೂ ಚಾಲಕ ನಿರಂಜನ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಲ್ಕಾರ್ ಜಂಕ್ಷನ್ ನಲ್ಲಿ ಬುಧವಾರ ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಸಾರ್ವಜನಿಕರಿಗೆ ಹಾಗೂ ಲಾರಿ ಚಾಲಕ ಅಬ್ದುಲ್ ಸಲಾಂ ಅವರ ಮಧ್ಯೆ ಗಲಾಟೆ ನಡೆಯುತ್ತಿದ್ದು, ಆ ಸಮಯಕ್ಕೆ ಬಂಟ್ವಾಳ ನಗರ ಠಾಣಾ ಎ.ಎಸ್. ಐ ಶೈಲೇಶ್ ಮತ್ತು ಮೂವರು ಸಿಬ್ಬಂದಿ ಗಳು ಸ್ಥಳಕ್ಕೆ ಭೇಟಿ ನೀಡಿದರು. ಪೋಲೀಸರು ಗಲಾಟೆ ನಿಲ್ಲಿಸಲು ಮುಂದಾದ ವೇಳೆ ಪೋಲೀಸರ ಮೇಲೆ ಆರೋಪಿ ಅಬ್ದುಲ್ ಸಲಾಂ ಅವರು ರಾಡ್ ನಿಂದ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ, ಜೊತೆಗೆ ಪೋಲೀಸ್ ಜೀಪ್ ಗೂ ರಾಡ್ ನಿಂದ ಹೊಡೆದು ಪುಡಿ ಮಾಡಿದ್ದಾನೆ ಹಾಗೂ ಪೋಲೀಸರನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪೋಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಯ ಮೇಲೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಲ್ಲೆ ನಡೆಸಿದ್ದು ಗಾಯಗಳಾಗಿವೆ.

Related Articles

Leave a Reply

Your email address will not be published.

Back to top button